ಅಂತರಾಷ್ಟ್ರೀಯ

ವ್ಯಾಸಂಗ, ಉದ್ಯೋಗಕ್ಕಾಗಿ ಬರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತೇವೆ : ಬ್ರಿಟನ್‌

Pinterest LinkedIn Tumblr

group of female college girls closeup portrait

ನವದೆಹಲಿ, ಡಿ.13: ವ್ಯಾಸಂಗ ಮಾಡಲು ಹಾಗೂ ನಂತರ ಉದ್ಯೋಗ ಮಾಡಲು ಬರುವ ಭಾರತೀಯ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಹಾರ್ದಿಕ ಸ್ವಾಗತವಿದೆ ಎಂದು ಬ್ರಿಟನ್‌ನ ವಿಜ್ಞಾನಿ ಮತ್ತು ವಿಶ್ವವಿದ್ಯಾಲಯಗಳ ಸಚಿವ ಜೋ-ಜಾನ್ಸನ್ ಹೇಳಿದ್ದಾರೆ.

ಭಾರತ ಭೇಟಿಗೆ ಆಗಮಿಸಿರುವ ಸಚಿವ ಜೋ ಜಾನ್ಸನ್, ಇಲ್ಲಿನ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭಾರತೀಯ ವಿದ್ಯಾರ್ಥಿಗಳು ಗ್ರೇಟ್ ಬ್ರಿಟನ್‌ನಲ್ಲಿ ವ್ಯಾಸಂಗ ಮಾಡುವುದು ಹಾಗೂ ಉದ್ಯೋಗ ಮಾಡುವುದು ಪ್ರತಿಭಾ ಪಲಾಯನವೆಂದು ಭಾವಿಸುವಂತಿಲ್ಲ. ಅದೊಂದು ರೀತಿಯ ಪ್ರತಿಭಾ ವಿನಿಮಯ ಮತ್ತು ಅನಾವರಣ ಎಂದು ಹೇಳಿದ್ದಾರೆ. ಭಾರತದಲ್ಲಿ ಬ್ರಿಟನ್ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ಬ್ರಿಟನ್‌ನಲ್ಲೂ ಕಾರ್ಯನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ.

Write A Comment