ರಾಷ್ಟ್ರೀಯ

ಶಾಕೂರ್ ಬಸ್ತಿ ತೆರವು: ದೆಹಲಿ ಸರ್ಕಾರ, ಪೊಲೀಸ್, ರೇಲ್ವೆಗೆ ಹೈ ನೋಟಿಸ್

Pinterest LinkedIn Tumblr

shakurನವದೆಹಲಿ: 6 ವರ್ಷದ ಮಗುವನ್ನು ಬಲಿ ಪಡೆದ ಶಾಕೂರ್ ಬಸ್ತಿ ತೆರವು ಪ್ರಕರಣ ಸಂಬಂಧ ದೆಹಲಿ ಸರ್ಕಾರ, ದೆಹಲಿ ಪೊಲೀಸ್ ಹಾಗೂ ರೇಲ್ವೆ ಇಲಾಖೆಗೆ ಸೋಮವಾರ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ರೇಲ್ವೆ ಇಲಾಖೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ದಿಢೀರ್ ತೆರವು ಒಂದು ಅಮಾನವೀಯ ಎಂದಿದ್ದೆ. ಅಲ್ಲದೆ ರೇಲ್ವೆ ಇಲಾಖೆ ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಶಾಕೂರ್ ಬಸ್ತಿ ತೆರವು ಕಾರ್ಯಾಚರಣೆಗೂ ಮುನ್ನ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ದೆಹಲಿ ಸರ್ಕಾರ, ದೆಹಲಿ ಪೊಲೀಸ್ ಹಾಗೂ ರೇಲ್ವೆ ಇಲಾಖೆಗೆ ಕೋರ್ಟ್ ಜಾರಿ ಮಾಡಿದೆ.

ಇದಕ್ಕೂ ಮುನ್ನ ಘಟನೆ ಸಂಬಂಧ ಕೇಂದ್ರ ಸರ್ಕಾರ ಮತ್ತು ರೇಲ್ವೆ ಇಲಾಖೆ ವಿರುದ್ಧ ವಾಗ್ದಾಳಿ ತೀವ್ರ ವಾಗ್ದಾಳಿ ನಡೆಸಿದ್ದ ದೆಹಲಿ ಸರ್ಕಾರ, ಇದೊಂದು ಅಮಾನವೀಯ ಕೃತ್ಯ ಎಂದಿತ್ತು.

ಈ ಸಂಬಂಧ ರೇಲ್ವೆ ಸಚಿವ ಸುರೇಶ್ ಪ್ರಭು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಕ್ಸಮರ ನಡೆಸಿದ್ದರು.

ಪಶ್ಚಿಮ ದೆಹಲಿಯ ಶಾಕೂರ್ ಬಸ್ತಿ ಎಂಬಲ್ಲಿ ಸುಮಾರು 1200 ಕೊಳೆಗೇರಿ ಗುಡಿಸಲುಗಳಿದ್ದವು. ಇವುಗಳನ್ನು ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ  ಮಾಡಿ ನಿರ್ಮಿಸಲಾಗಿದೆ ಎಂಬ ಕಾರಣ  ನೀಡಿ ಇಲಾಖೆ ತೆರವು ಕಾರ್ಯಾಚರಣೆ ನಡೆಸಿತು. ಈ ವೇಳೆ ಆರು ತಿಂಗಳ ಮಗುವೊಂದು ಮೃತಪಟ್ಟಿತ್ತು. ಈ ಘಟನೆ ರೈಲ್ವೆ ಇಲಾಖೆ ಮತ್ತು ದೆಹಲಿ ಸರ್ಕಾರದ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಘಟನೆಗೆ ರೈಲ್ವೆ ಇಲಾಖೆ ಕಾರಣವಲ್ಲ, ಕಾರ್ಯಾಚರಣೆಗೂ ಮುನ್ನವೇ ಮಗು ಮೃತಪಟ್ಟಿತ್ತು ಎಂದು ಸುರೇಶ್ ಪ್ರಭು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

Write A Comment