ರಾಷ್ಟ್ರೀಯ

ಪೂಂಛ್ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣ ನಾಶ : ಶಸ್ತ್ರಾಸ್ತ್ರಗಳು ವಶ, ತಪ್ಪಿದ ದುರಂತ

Pinterest LinkedIn Tumblr

bomb

ಶ್ರೀನಗರ, ಡಿ.15: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗುತಾಣವೊಂದನ್ನು ಪತ್ತೆಹಚ್ಚಿ ನಾಶಪಡಿಸಿರುವ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳುವ ಮೂಲಕ ಸಂಭಾವ್ಯ ವಿಧ್ವಂಸಕ ಕೃತ್ಯದ ಉಗ್ರ ಯತ್ನವನ್ನು ವಿಫಲಗೊಳಿಸಿವೆ.

ಉಗ್ರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಸುಳಿವು ಪಡೆದ ಭದ್ರತಾ ಸಿಬ್ಬಂದಿ ಪೂಂಛ್ ಜಿಲ್ಲೆ ಮೆಂಧಾರ್ ತಾಲೂಕಿನ ಬೆರಿರಾಖ್ ಅರಣ್ಯ ಪ್ರದೇಶದಲ್ಲಿ ದಾಳಿ ಮಾಡಿದ್ದಾರೆ. ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದಾಗ, ಪ್ರಬಲವಾದ ನಾಲ್ಕು ಚೈನೀಸ್ ಗ್ರೆನೇಡ್‌ಗಳು, 3 ಗ್ರೆನೇಡ್ ಲಾಂಚರ್‌ಗಳು, 9 ಎಂಎಂನ ಮೂರು ಪಿಸ್ತೂಲ್‌ಗಳು, ಮಾಗಜಿನ್‌ಗಳು 24 , 9 ಎಂಎಂ ಗುಂಡುಗಳು, ನಾಲ್ಕು ಎಕೆ ಮಾಗಜಿನ್‌ಗಳು, 276 ರೌಂಡ್ ಎಕೆ ಗುಂಡುಗಳು, ಐದು ವಿದ್ಯುತ್ ಡಿಟೊನೇಟರ್‌ಗಳು ಹಾಗೂ ಐದು ಎಲೆಕ್ಟ್ರಿಕ್ ಕಂಪೊಟೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆ ವಕ್ತಾರರು ತಿಳಿಸಿದ್ದಾರೆ.

Write A Comment