ಮನೋರಂಜನೆ

ಐಪಿಎಲ್ ಹರಾಜು: 12.5 ಕೋಟಿಗೆ ಪುಣೆ ಧೋನಿ, ರಾಜ್‌ಕೋಟ್‌ ರೈನಾ ಖರೀದಿ

Pinterest LinkedIn Tumblr

dhoni-raina11

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೊಸ ಫ್ರಾಂಚೈಸಿ ತಂಡಗಳಾದ ಪುಣೆ ಮತ್ತು ರಾಜ್ ಕೋಟ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದು, ನಿಷೇಧಿತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯನ್ನು 12.5 ಕೋಟಿ ರುಪಾಯಿಗೆ ಪುಣೆ ಖರೀದಿಸಿದರೆ, 12.5 ಕೋಟಿಗೆ ಸುರೇಶ್ ರೈನಾರನ್ನು ರಾಜ್‌ಕೋಟ್‌ ತಂಡ ಖರೀದಿಸಿದೆ.

ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಹರಾಜಿನಲ್ಲಿ ಒಟ್ಟು 50 ಮಂದಿ ಆಟಗಾರರು ಭಾಗವಹಿಸಿದ್ದರು. ಇದರಲ್ಲಿ ಎರಡು ಫ್ರಾಂಚೈಸಿಗಳು ತಲಾ 5 ಆಟಗಾರರನ್ನು ಖರೀದಿಸಿದೆ.

ಪುಣೆ ತಂಡ
ಮಹೇಂದ್ರ ಸಿಂಗ್ ಧೋನಿ 12.5 ಕೋಟಿ
ಅಜಿಂಕ್ಯಾ ರಹಾನೆ 9.5 ಕೋಟಿ
ಆರ್. ಅಶ್ವಿನ್ 7.5 ಕೋಟಿ
ಸ್ಟೀವನ್ ಸ್ಮಿತ್ 5.5 ಕೋಟಿ
ಡುಪ್ಲೇಸಿಸ್ 4 ಕೋಟಿ
ರಾಜ್‌ಕೋಟ್‌ ತಂಡ
ಸುರೇಶ್ ರೈನಾ 12.5 ಕೋಟಿ
ರವೀಂದ್ರ ಜಡೇಜಾ 9.5 ಕೋಟಿ
ಬ್ರೆಂಡನ್ ಮೆಕ್ಲಮ್ 7.5 ಕೋಟಿ
ಜೇಮ್ಸ ಫುಲ್ಕನರ್ 5.5 ಕೋಟಿ
ಡ್ವೇಯ್ನ್ ಬ್ರಾವೋ 4 ಕೋಟಿ

Write A Comment