ರಾಷ್ಟ್ರೀಯ

ಮ್ಯಾಗಿಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆ : ಮರು ಪರಿಶೀಲನೆಗೆ ಸುಪ್ರೀಂಕೋರ್ಟ್ ಸೂಚನೆ

Pinterest LinkedIn Tumblr

magiನವದೆಹಲಿ, ಡಿ.16- ಮ್ಯಾಗಿ ಸ್ಯಾಂಪಲ್‌ಗಳನ್ನು ಮರು ಪರಿಶೀಲನೆಗೆ ಒಳಪಡಿಸಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈಗಾಗಲೇ ದೇಶದ ಹಲವು ಕಡೆ ಸ್ಯಾಂಪಲ್‌ಗಳನ್ನು ಪಡೆದು ಪರಿಶೀಲನೆ ನಡೆಸಲಾಗಿದೆ. ಆದರೆ ಅಂತಹ ಸಂಸ್ಥೆಗಳು ರಾಷ್ಟ್ರೀಯ ಮಾನ್ಯತಾ ಮಂಡಳಿ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಆಯೋಗ ಹೇಳಿದೆ.

ಈ ಸಂಬಂಧ ನಿನ್ನೆ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಮ್ಯಾಗಿ ಪ್ಯಾಕೆಟ್‌ಗಳನ್ನು ದೇಶದ ವಿವಿಧೆಡೆ ಸಂಗ್ರಹಿಸಿ ಹೊಸದಾಗಿ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಸೂಚನೆ ನೀಡಿದೆ.

ಇಂದು ನೆಸ್ಟ್ಲೇ ಇಂಡಿಯಾ ತನ್ನ ವಾದವನ್ನು ಮಂಡಿಸಲಿದ್ದು , ನ್ಯಾಯಾಲಯ ಕೆಲವೊಂದು ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.

Write A Comment