ರಾಷ್ಟ್ರೀಯ

ಇಂಧನ ಬೇಡಿಕೆ, ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ: ರಾಷ್ಟ್ರಪತಿ

Pinterest LinkedIn Tumblr

president

ನವದೆಹಲಿ: ಭಾರತ ತನ್ನ ಅಭಿವೃದ್ಧಿ ದರವನ್ನು ಶೇ.8 ರಷ್ಟು ಕಾಯ್ದುಕೊಳ್ಳಲು, ಇಂಧನ ಬೇಡಿಕೆ ಹಾಗೂ ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ನವದೆಹಲಿಯಲ್ಲಿ ಯುಸಿ ಬರ್ಕಲೀ- ಹ್ಯಾಸ್ ಸ್ಕೂಲ್ ಆಫ್ ಬ್ಯುಸಿನೆಸ್ ನಿಂದ ಗಾರ್ವುಡ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಣಬ್ ಮುಖರ್ಜಿ, ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ.17 ರಷ್ಟು ಜನಸಂಖ್ಯೆ ಭಾರತದಲ್ಲಿದೆ. ಆದರೆ ವಿಶ್ವ ಒಟ್ಟಾರೆ ಬಳಸುವ ವಿದ್ಯುತ್ ನ ಶೇ.5 ರಷ್ಟನ್ನು ಮಾತ್ರ ಭಾರತ ಬಳಸುತ್ತಿದ್ದು ಇಂಧನ ಬೇಡಿಕೆ ಪೂರೈಕೆ ಮಾಡುವುದರೊಂದಿಗೆ ಪರಿಸರವನ್ನು ರಕ್ಷಿಸುವುದು ಸವಾಲಿನ ಸಂಗತಿ ಎಂದು ಹೇಳಿದ್ದಾರೆ.

ಹೊಸತನ್ನು ಕಂಡುಹಿಡಿಯುವುದು ಸರ್ಕಾರಗಳಿಗೆ ಮುಖ್ಯವಾಗಿದ್ದು ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಾವೀನ್ಯತೆಯೇ ಚಾಲಕ, ಹೊಸತನ್ನು ಕಂದುಹಿಡಿಯುವುದರಿಂದ ಪರಿಸರದಲ್ಲಿ ಹೊಸ ವ್ಯವಸ್ಥೆ ಉಂಟುಮಾಡಲು ಸಾಧ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

Write A Comment