ರಾಷ್ಟ್ರೀಯ

ವಿಶ್ವದಾದ್ಯಂತ ಇದ್ದಾರೆ 60 ಮಿಲಿಯನ್ ಮಂದಿ ನಿರಾಶ್ರಿತರು..!

Pinterest LinkedIn Tumblr

sumanನವದೆಹಲಿ, ಡಿ.18- ವಿಶ್ವದಲ್ಲಿ ಈವರೆಗೂ ಸುಮಾರು 60 ಮಿಲಿಯನ್‌ಗೂ ಹೆಚ್ಚು ಜನ ನಿರ್ವಸತಿಗರೂ ಹಾಗೂ  ನಿರಾಶ್ರಿತರು ಇದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಿರಿಯಾದ ಯುದ್ಧ ಹಾಗೂ  ಇತರೆ ಸಂಕಷ್ಟ ಸಂದರ್ಭಗಳಿಂದ  ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದೆ.

2014ರ ವರೆಗೂ ವಿಶ್ವದಲ್ಲಿ 59.5 ಮಿಲಿಯನ್ ಜನ ನಿರ್ವಸತಿಗರಿದ್ದರು. 1992ರಿಂದೀಚೆಗೆ ಈ ಸಂಖ್ಯೆ ಒಟ್ಟು 60 ಮಿಲಿಯನ್ ದಾಟಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು  ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಜರ್ಮನಿ, ರಷ್ಯಾ, ಅಮೆರಿಕಾ ದೇಶಗಳಿಗೆ ಆಗಮಿಸುತ್ತಿರುವ ನಿರಾಶ್ರಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಅಸಹನೆ, ಯುದ್ಧ ಪೈಶಾಚಿಕ ತನ ಮತ್ತು ಭಯದ ವಾತಾವರಣದಿಂದಾಗಿ ದೇಶದಿಂದ ದೇಶಕ್ಕೆ ವಲಿಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಿರಿಯಾ ಒಂದರಲ್ಲೇ 7.6 ಮಿಲಿಯನ್ ಜನ ವಲಸೆ ಹೋಗಿದ್ದಾರೆ.

Write A Comment