ನವದೆಹಲಿ: ದೆಹಲಿ ಸರ್ಕಾರದ ಹೊಸ ವಾಹನ ಸಂಚಾರ ವ್ಯವಸ್ಥೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊಸವರ್ಷಾರಂಭದಲ್ಲಿ ದೆಹಲಿ ಶಾಲೆಗಳಿಗೆ 15 ದಿನ ರಜೆ ಘೋಷಿಸಲಾಗಿದೆ.
ಶಾಲಾ ಶಿಕ್ಷಣ ನಿರ್ದೇಶಕರು ಮತ್ತು ಶಾಲಾ ಅಧಿಕೃತರೊಂದಿಗೆ ಈ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗುತ್ತಿದೆ.
ವಾಹನ ಸಂಚಾರ ವ್ಯವಸ್ಥೆ ಪರಿಷ್ಕರಣೆ ಜಾರಿಗೆ ಬರುವ ದಿನಗಳಾದ ಜನವರಿ 1 ರಿಂದ 15 ರವರೆಗೆ ಇಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ . ಸಮ ಮತ್ತು ಬೆಸ ಸಂಖ್ಯೆಯ ವಾಹನಗಳು ಒಂದೊಂದು ದಿನ ಸಂಚರಿಸಬೇಕು ಎಂಬ ನಿಯಮ ಜಾರಿಗೆ ಬಂದಾಗ ಕೆಲವೊಂದು ಬಸ್ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ. ಇದೀಗ ದೆಹಲಿ ಟ್ರಾನ್ಸ್‌ಪೋರ್ಟ್ ಕಾರ್ಪರೇಷನ್‌ನ 2000 ಬಸ್‌ಗಳನ್ನು ಶಾಲಾ ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಬಳಸಲಾಗುತ್ತಿದೆ. ಇದು ಸಂಚಾರ ವ್ಯವಸ್ಥೆ ಪರಿಷ್ಕರಣೆಗೊಳಪಟ್ಟಾಗ ಬಸ್‌ಗಳ ಸಂಖ್ಯೆಯೂ ಕಡಿಮೆಯಾಗಲಿದೆ. ಮಾತ್ರವಲ್ಲದೆ ಹೊಸ ಬಸ್‌ಗಳಲ್ಲಿ ಅರ್ಧದಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲು ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಈಗಾಗಲೇ ಶಿಕ್ಷಣ ನಿರ್ದೇಶನಾಲಯ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ರಜೆಯ ಬಗ್ಗೆ ಸುತ್ತೋಲೆ ಕಳುಹಿಸಿದೆ.