ಭೋಪಾಲ್ : ನಟ ಶಾರುಖ್ ಖಾನ್ ಒಳ್ಳೆಯ ಮನುಷ್ಯ, ದೇಶಪ್ರೇಮಿ ಆತನ ಹೊಸ ಚಿತ್ರ ದಿಲ್‌ವಾಲೆ ನಿಜಕ್ಕೂ ಒಂದು ಒಳ್ಳೆಯ ಸಿನೆಮಾ, ಎಲ್ಲರೂ ಅದನ್ನು ನೋಡಬೇಕು’ ಎಂದು ಮಧ್ಯಪ್ರದೇಶದ ಗೃಹ ಸಚಿವ ಬಾಬುಲಾಲ್ ಗೌರ್ ಹೇಳಿದ್ದಾರೆ.
ಶಾರುಖ್ ನಟನೆಯ ಹೊಸ ಚಿತ್ರ ದಿಲ್‌ವಾಲೆ ಬಿಡುಗಡೆ ಹಾಗೂ ಪ್ರದರ್ಶನವನ್ನು ವಿರೋಧಿಸಿ ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಗೌರ್ ಅವರಿಂದ ಶಾರುಖ್ ಪ್ರಶಂಸೆಯ ಈ ಮಾತುಗಳು ಪುಂಖಾನುಪುಂಖವಾಗಿ ಹರಿದು ಬಂದಿರುವುದು ಸೋಜಿಗವೆಂದು ತಿಳಿಯಲಾಗಿದೆ.
ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯವರ್ಗಿಯ ಅವರು ಶಾರುಖ್ ಅವರ ಅಸಹಿಷ್ಣುತೆ ಕುರಿತಾದ ಪ್ರತಿಕ್ರಿಯೆಯನ್ನು ಈ ಹಿಂದೆ ಬಲವಾಗಿ ಖಂಡಿಸಿದ್ದರು.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ದಿಲ್‌ವಾಲೆ ಚಿತ್ರಕ್ಕೆ ಭೋಪಾಲ್, ಇಂದೋರ್, ಜಬಲ್ಪುರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಶಾರುಖ್ ಅವರು “ದೇಶದಲ್ಲಿ ಈಚಿನ ದಿನಗಳಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಿಡಿ ಹಚ್ಚಿದುದನ್ನು ಪ್ರತಿಭಟನಕಾರರು ಬಲವಾಗಿ ಖಂಡಿಸಿದ್ದಾರೆ.
-ಉದಯವಾಣಿ