ರಾಷ್ಟ್ರೀಯ

ಮೋದಿ ಜಾಕೆಟ್ ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಜನಪ್ರಿಯ: ಕಲ್‍ರಾಜ್ ಮಿಶ್ರಾ

Pinterest LinkedIn Tumblr

narendra-modiನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ಲೀವ್’ಲೆಸ್ ಜಾಕೆಟ್ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲೂ ಜನಪ್ರಿಯತೆ ಪಡೆದಿದೆ ಎಂದು ಕೇಂದ್ರ ಸಚಿವ ಕಲ್‍ರಾಜ್  ಮಿಶ್ರಾ  ಅವರು ಸೋಮವಾರ ಹೇಳಿದ್ದಾರೆ.

ಜವಾಹರ್ ಲಾಲ್ ನೆಹರು ಅವರು ಪ್ರಧಾನಮಂತ್ರಿಯಾಗಿದ್ದಾಗಲೂ ಅವರು ತೊಡುತ್ತಿದ್ದ ಜಾಕೆಟ್ ಭಾರತದಲ್ಲಿ ಭಾರೀ ಹೆಸರು ಮಾಡಿತ್ತು. ಜನಪ್ರಿಯತೆಯನ್ನು ಪಡೆದಿತ್ತು. ಇದೀಗ ಮೋದಿಯವರು ತೊಡುವ ಜಾಕೆಟ್ ಕೂಡ ದೇಶ-ವಿದೇಶದಲ್ಲಿ ಹೆಸರು ಮಾಡುತ್ತಿದೆ. ಇತ್ತೀಗಷ್ಟೇ ಜಪಾನ್ ಪ್ರಧಾನಮಂತ್ರಿ ಶಿಂಜೊ ಆಬೆ ಕೂಡ ಮೋದಿಯವರ ಜಾಕೆಟ್ ನ್ನು ಹಾಕಿಕೊಂಡಿದ್ದರು. ಇದೀಗ ನಮ್ಮ ಸರ್ಕಾರ ಕೂಡ ಈ ಬಗ್ಗೆ ಸಾಕಷ್ಟು ಗಮನ ಹರಿಸಿದ್ದು, ಖಾದಿ ಕುರಿತಂತೆ ಪ್ರಚಾರವನ್ನು ಹೆಚ್ಚುವ ಕಾರ್ಯಗಳನ್ನು ಮಾಡುತ್ತೇವೆಂದು ಹೇಳಿದ್ದಾರೆ.

ಖಾದಿ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಧನ ಸಹಾಯ ಮಾಡಲು ಮತ್ತಷ್ಟು ಬೆಂಬಲ ನೀಡಲು ಮುಂದಾಗಿದ್ದು, ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಪ್ರಸ್ತುತ ದೇಶದಲ್ಲಿ 7050 ಖಾದಿ ಸಂಸ್ಥೆಗಳಿವೆ. ಇದಲ್ಲದೆ, 7 ಖಾದಿ ಗ್ರಾಮೋದ್ಯೋಗ ಭವನಗಳು ಮತ್ತು 1 ಗ್ರಾಮಶಿಲ್ಪ ಇದೆ. 2014-15ರಲ್ಲಿ ರು.12,513.72 ರಷ್ಟು ಉತ್ಪಾದನಾ ಖಾದಿಬಟ್ಟೆಗಳು ಖಾದಿ ಮಳಿಗೆಗಾರರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ.

Write A Comment