ಹೊಸದಿಲ್ಲಿ, ಡಿ.22: ಬಾಲಿವುಡ್ ಬಾದ್ಷಾ ಶಾರೂಕ್ ಖಾನ್ ಮತ್ತು ಕಾಜೋಲ್ ಅಭಿನಯದ ಚಿತ್ರ ದಿಲ್ವಾಲ್ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದು, ಬಾಜಿರಾವ್ ಮಸ್ತಾನಿಯನ್ನು ಮೀರಿಸಿದೆ.
ವಿಶ್ವದಾದ್ಯಂತ ಬಿರುಗಾಳಿ ಎಬ್ಬಿಸಿರುವ ದಿಲ್ವಾಲೆ ಚಿತ್ರದ ಈ ವರೆಗಿನ ಗಳಿಕೆ 191ಕೋಟಿ. ರೂ. ಇದೇ ವೇಳೆ ಬಾಲಿವುಡ್ ತಾರೆ ದಿಪೀಕಾ ಪಡುಕೊಣೆ ಮತ್ತು ರಣವೀರ್ ಸಿಂಗ್ ಅಭಿನಯದ ಚಿತ್ರ ಬಾಜಿರಾವ್ ಮಸ್ತಾನಿ ಗಳಿಕೆ 91 ಕೋಟಿ ರೂ.ಗಳೆಂದು ಮೂಲಗಳು ತಿಳಿಸಿವೆ.