ರಾಷ್ಟ್ರೀಯ

ಬಸ್ ಓಡಿಸಿದ ಕಪಿರಾಯನನ್ನು ಕಂಡು ಕಕ್ಕಾಬಿಕ್ಕಿಯಾದ ಜನ

Pinterest LinkedIn Tumblr

drive_monkey_drive

ಬರೇಲಿ, ಡಿ.23: ಅದೇ ತಾನೆ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಡ್ರೈವರ್ ಕೆಳಗಿಳಿದಿದ್ದ. ನೋಡು ನೋಡುತ್ತಿದ್ದಂತೆ ಬಸ್ ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಡ್ರೈವರ್ ಕಕ್ಕಾಬಿಕ್ಕಿ. ಡ್ರೈವರ್ ಭಾರೀ ಆತಂಕದಿಂದ ಒಳಗೆ ನೋಡಿದರೆ ಅವನ ಸೀಟ್‌ನಲ್ಲಿ ಮಂಗವೊಂದು ಕುಳಿತಿದೆ.

ನಡೆದದ್ದಿಷ್ಟು: ಚಾಲಕ ಇಳಿದ ತಕ್ಷಣ, ಸಮೀಪದಲ್ಲಿದ್ದ ಮಂಗ ಒಳಕ್ಕೆ ಹೋಗಿ, ಚಾಲಕನ ಸೀಟಿನಲ್ಲಿ ಕುಳಿತು, ಕಿ ಒತ್ತಿಯೇ ಬಿಟ್ಟಿತು. ಸ್ಟಾರ್ಟ್ ಆದ ಬಸ್ ಸೆಕೆಂಡ್ ಗೇರ್‌ನಲ್ಲಿ ಮುಂದೆ ಸಾಗಿತು. ಮಂಗ ಸ್ಟಿಯರಿಂಗ್ ಮೇಲೆ ಕೈಗಳನ್ನಿಟ್ಟು ಬ್ಯಾಲೆನ್ಸ್ ಮಾಡುತ್ತಿತ್ತು. ಇದನ್ನು ಕಂಡು ಜನ ಕಂಗಾಲಾದರು. ಪುಣ್ಯಕ್ಕೆ ಬಸ್‌ನಲ್ಲಿ ಯಾರೂ ಇರಲಿಲ್ಲ. ಅಂತೂ-ಇಂತೂ ಡ್ರೈವರ್ ಬಸ್ ಹತ್ತಿರ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ. ಅಷ್ಟರಲ್ಲಾಗಲೇ ಬಸ್ ಅಲ್ಲೇ ನಿಂತಿದ್ದ ಇನ್ನೆರಡು ಬಸ್‌ಗಳಿಗೆ ಡಿಕ್ಕಿ ಹೊಡೆದಿತ್ತು.

ಇಗ್ನಿಷನ್ ಕೀಯನ್ನು ಅಲ್ಲಿಯೇ ಬಿಟ್ಟಿದ್ದೇ ಡ್ರೈವರ್ ಮಾಡಿದ್ದ ತಪ್ಪು. ಒಟ್ಟಾರೆ ಚಾಲಕನ ತನ್ನ ಬುದ್ಧಿಶಕ್ತಿ ಉಪಯೋಗಿಸಿ ಒಳೆಕ್ಕೆ ಪ್ರವೇಶಿಸಿ ಮಂಗನ ಕೈಯಲ್ಲಿ ಸ್ಟಿಯರಿಂಗ್ ವಶಕ್ಕೆ ಪಡೆದು ಬಸ್‌ನ್ನು ನಿಯಂತ್ರಿಸಿದ. ಇದರಿಂದ ಹೆಚ್ಚಿನ ಅನಾಹುತ ತಪ್ಪಿತು. ಜನ ನಿಟ್ಟುಸಿರು ಬಿಟ್ಟರು. ಕೊನೆಗೆ ಮಂಗ ತಾನೂ ಒಬ್ಬ ಚಾಲಕನೋ ಎಂಬಂತೆ ನಿಧಾನವಾಗಿ ಕೆಳಗಿಳಿದು ಕಚೇರಿ ಕಡೆಗೆ ತೆರಳಿತು. ಜನ ಬಿಟ್ಟ ಕಣ್ಣು ಬಿಟ್ಟಂತೆ ಈ ತಮಾಷೆ ನೋಡುತ್ತಿದ್ದರು. ಸಾಮಾನ್ಯವಾಗಿ ಈ ಮಂಗ ಯಾವಾಗಲೂ ಇಲ್ಲಿಯೇ ಅಡ್ಡಾಡುತ್ತಿದ್ದು, ಇಲ್ಲಿನ ಸಿಬ್ಬಂದಿಯ ಗೆಳೆಯನೇ ಆಗಿದೆ.

Write A Comment