ರಾಷ್ಟ್ರೀಯ

ವಿಳಂಬ ಆಗಮನ, ವಿಮಾನ ಪ್ರವೇಶಕ್ಕೆ ಕೇರಳ ರಾಜ್ಯಪಾಲರಿಗೇ ನಕಾರ

Pinterest LinkedIn Tumblr

kerala-gov-wefffತಿರುವನಂತಪುರ: ತಡವಾಗಿ ಬಂದದ್ದಕ್ಕಾಗಿ ಏರ್ ಇಂಡಿಯಾ ಪೈಲಟ್ ಒಬ್ಬರು ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರಿಗೆ ಕೊಚ್ಚಿ- ತಿರುವನಂತಪುರ ವಿಮಾನ ಪ್ರವೇಶಕ್ಕೆ ನಿರಾಕರಿಸಿದ ಘಟನೆ ಮಂಗಳವಾರ ರಾತ್ರಿ ಘಟಿಸಿದೆ.

ಕೊಚ್ಚಿ ವಿಮಾನ ನಿಲ್ದಾಣದಿಂದ ಎಐ 408 ವಿಮಾನ 9.15ರ ಬದಲಿಗೆ ತಡವಾಗಿ 10.40ಕ್ಕೆ ಹೊರಡಬೇಕಾಗಿತ್ತು. ರಾಜ್ಯಪಾಲ ಸದಾಶಿವಂ ಅವರು ವಿಮಾನ ಹೊರಡುವುದಕ್ಕೆ ಕನಿಷ್ಠ 10 ನಿಮಿಷ ಮುಂಚಿತವಾಗಿ ಆಗಮಿಸಿದ್ದರು. ಆದರೆ ಅದಾಗಲೇ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸುವ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿ ವಿಮಾನದ ಪೈಲಟ್ ರಾಜ್ಯಪಾಲರಿಗೆ ವಿಮಾನ ಪ್ರವೇಶಕ್ಕೆ ನಿರಾಕರಿಸಿದ ಎಂದು ರಾಜಭವನ ತಿಳಿಸಿದೆ.

ರಾಜ್ಯಪಾಲರ ಜೊತೆಗಿದ್ದ ಅಧಿಕಾರಿಗಳು ಪೈಲಟ್ ಮನವೊಲಿಸಲು ಯತ್ನಿಸಿದರು. ಆದರೆ ಪೈಲಟ್ ಒಪ್ಪಲಿಲ್ಲ. ಪರಿಣಾಮವಾಗಿ ಸದಾಶಿವಂ ಅವರು ಕೊಚ್ಚಿ ಅತಿಥಿ ಗೃಹದಲ್ಲಿ ರಾತ್ರಿ ಕಳೆಯಬೇಕಾಯಿತು. ಅವರು ಬುಧವಾರ ಬೆಳಗ್ಗೆ ವಿಮಾನ ಏರಿ ತಿರುವನಂತಪುರಕ್ಕೆ ಆಗಮಿಸಿದರು. ಘಟನೆ ಬಗ್ಗೆ ರಾಜಭವನದ ಅಧಿಕಾರಿಗಳು ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ಏರ್ ಇಂಡಿಯಾ ಅಧಿಕಾರಿಗಳಿಂದ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ಹೇಳಿವೆ.

Write A Comment