ರಾಷ್ಟ್ರೀಯ

ದುಪ್ಪಟ್ಟಾಗಲಿದೆ ಸಂಸದರ ಮಾಸಿಕ ವೇತನ

Pinterest LinkedIn Tumblr

mpನವದೆಹಲಿ, ಡಿ.24- ಸಂಸದರ ಮಾಸಿಕ ವೇತನವನ್ನು ದ್ವಿಗುಣಗೊಳಿಸುವ ಬಗ್ಗೆ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಈ ಯೋಜನೆ ಜಾರಿಗೆ ಬಂದರೆ, ಲೋಕಸಭಾ ಸದಸ್ಯರ ವೇತನವನ್ನು ವಿವಿಧ ಭತ್ಯೆಗಳು ಸೇರಿದಂತೆ 2.8 ಲಕ್ಷಕ್ಕೆ ಏರಿಕೆಯಾಗಲಿದೆ.

ಅಲ್ಲದೆ, ನಿವೃತ್ತಿ ವೇತನ (ಪಿಂಚಣಿ)ವನ್ನು ಪ್ರಸ್ತುತ ಇರುವ 20ಸಾವಿರ ರೂ. ಮೊತ್ತವನ್ನು 35 ಸಾವಿರ ರೂ. ಗಳಿಗೆ ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದೆ.

ಜೊತೆಗೆ 5 ವರ್ಷಗಳ ಅವಧಿ ಪೂರೈಸಿದ ಸಂಸದರು ಹೆಚ್ಚುವರಿಯಾಗಿ 2 ಸಾವಿರ ರೂ. ಪಡೆಯಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

Write A Comment