ರಾಷ್ಟ್ರೀಯ

ಇಂದಿನಿಂದ ರೇಲ್ವೇ ತತ್ಕಾಲ್ ಟಿಕೆಟ್ ದರ ಏರಿಕೆ

Pinterest LinkedIn Tumblr

railways_india

ನವದೆಹಲಿ: ಪ್ರಯಾಣಿಕರಿಂದ ಹೆಚ್ಚಿನ ವರಮಾನ ಗಳಿಸುವ ಉದ್ದೇಶದಿಂದ ಭಾರತೀಯ ರೇಲ್ವೇ ಇಲಾಖೆ ತತ್ಕಾಲ್ ಟಿಕೆಟ್ ದರವನ್ನು ಏರಿಕೆ ಮಾಡಲು ತೀರ್ಮಾನಿಸಿದೆ.

ಪರಿಷ್ಕೃತ ದರ ನಾಳೆ (ಡಿಸೆಂಬರ್ 25) ರಿಂದ ಚಾಲ್ತಿಗೆ ಬರಲಿದೆ.

ತತ್ಕಾಲ್ ಪರಿಷ್ಕೃತ ದರದ ಪಟ್ಟಿ ಇಂತಿದೆ

ರು. 175 ಇದ್ದ ಸ್ಲೀಪರ್ ಕ್ಲಾಸ್ ತತ್ಕಾಲ್ ಬುಕಿಂಗ್ ಮಾಡಬೇಕಾದರೆ ರು. 200 ತೆರಬೇಕಾಗುತ್ತದೆ.

ಎಸಿ-3 ರು. 350 ಇದ್ದದ್ದು ರು. 400 ಆಗಿ ಏರಿಕೆ. ಕನಿಷ್ಠ  ರು. 250 ಇದ್ದದ್ದು ರು. 300 ಆಗಿ ಏರಿಕೆ

ಸ್ಲೀಪರ್ ಕ್ಲಾಸ್ ತತ್ಕಾಲ್ ಕನಿಷ್ಠ ದರ ರು. 90 ಇದ್ದದ್ದು ರು. 100 ಆಗಿ ಏರಿಕೆ.

ಪ್ರಯಾಣದ ದೂರ ಅವಲಂಬಿಸಿ ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ ಬದಲಾವಣೆ ಮಾಡಲಾಗಿದೆ.

ಎಸಿ ಕ್ಲಾಸ್ ಗೆ ಮಾತ್ರ ಈಗ ದರ ಏರಿಕೆ ಮಾಡಿದ್ದು ಸೆಕೆಂಡ್ ಕ್ಲಾಸ್ ತತ್ಕಾಲ್ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.

ಎಸಿ 2 ಪ್ರಯಾಣಿಕರಿಗೆ ಕನಿಷ್ಠ ತತ್ಕಾಲ್ ಟಿಕೆಟ್ ದರ ರು. 300 ರಿಂದ ರು. 400 ಆಗಿದ್ದು, ಗರಿಷ್ಠ ತತ್ಕಾಲ್ ದರ ರು. 400 ಇದ್ದದ್ದು ರು. 500 ಆಗಿ ಏರಿಕೆಯಾಗಿದೆ.

ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಕನಿಷ್ಠ ದರ ರು. 300 ಇದ್ದದ್ದು ರು. 400 ಆಗಿದ್ದು, ಗರಿಷ್ಠ ದರ ರು. 400 ಇದ್ದದ್ದು ರು. 500 ಆಗಿ ಏರಿಕೆಯಾಗಿದೆ.

Write A Comment