ರಾಷ್ಟ್ರೀಯ

ಮೋದಿ ಪಾಕ್ ಭೇಟಿ, ಅಮೆರಿಕದಲ್ಲಿ ಪ್ರಶಂಸೆ ಸುರಿಮಳೆ

Pinterest LinkedIn Tumblr

Media-Webfff

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನ ಭೇಟಿಗೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿವೆ. ಅಮೆರಿಕ ಮಾಧ್ಯಮಗಳು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಇದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದ್ದರೆ, ಪಾಕಿಸ್ತಾನದ ಪ್ರಬಲ ನಾಯಕರೆನಿಸಿಕೊಂಡಿರುವ ಪಿಪಿಪಿ ಚೇರ್ಮನ್ ಬಿಲವಾಲ್ ಬುಟ್ಟೋ ಜರ್ದಾರಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಕೂಡ ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ.

ಅಮೆರಿಕ ಮಾಧ್ಯಮಗಳಿಂದ ಪ್ರಶಂಸೆ

ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ‘ದ ವಾಲ್ ಸ್ಟ್ರೀಟ್ ಜರ್ನಲ್’ ಅಣುಶಕ್ತಿ ಹೊಂದಿರುವ ಉಭಯರಾಷ್ಟಗಳು ಬಾಂಧವ್ಯ ವೃದ್ಧಿಸಿಕೊಳ್ಳುವಲ್ಲಿ ಮೋದಿ ಭೇಟಿ ಸ್ವಾಗತಿಸುವಂತದ್ದು. ಇದು ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ಮಹತ್ವಪೂರ್ಣ ಹೆಜ್ಜೆ ಎಂದು ಶ್ಲಾಘಿಸಿದೆ. ಹಾಗೇ ‘ದ ಚಿಕಾಗೋ ಟ್ರಿಬ್ಯೂನ್’ ಟೈಮ್ ಮ್ಯಾಗಝಿನ್, ನ್ಯಾಷನಲ್ ಪಬ್ಲಿಕ್ ರೇಡಿಯೋ ಕೂಡ ಇದನ್ನು ಶ್ಲಾಘಿಸಿ ಬರೆದಿದೆ. ಎರಡು ದೇಶಗಳು ಸೇರಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿವೆ.

ಇಮ್ರಾನ್, ಜರ್ದಾರಿ ಶ್ಲಾಘನೆ

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರ ನಡೆಯನ್ನು ವಿರೋಧಿಸುತ್ತಲೇ ಬಂದ ಪಾಕಿಸ್ತಾನದ ಪ್ರಬಲ ಪಕ್ಷಗಳಲ್ಲಿ ಒಂದಾದ ಪಿಪಿಪಿ ಚೇರ್ಮನ್ ಬಿಲವಾಲ್ ಬುಟ್ಟೋ ಜರ್ದಾರಿ ಮತ್ತು ತೆಹರೀಕ್ ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಕೂಡ ಮೋದಿ ಭೇಟಿಯನ್ನು ಸ್ವಾಗತಿಸಿದ್ದಾರೆ.

ಎರಡು ದೇಶಗಳ ನಡುವಿನ ಸಂವಹನ ಉತ್ತಮಗೊಳಿಸಿಕೊಂಡು ಸಾಗುವುದೇ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಇರುವ ಏಕೈಕ ದಾರಿ ಎಂದರೆ, ಉಭಯ ದೇಶಗಳ ನಾಯಕರ ಮಾತುಕತೆಯಿಂದ ಬಾಂಧವ್ಯ ವೃದ್ಧಿ ಸಾಧ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Write A Comment