ರಾಷ್ಟ್ರೀಯ

ರಿಯೋ ಒಲಂಪಿಕ್ಸ್​ಗೆ ಭಾರತೀಯ ರೆಫ್ರಿ ಅಶೋಕ್ ಆಯ್ಕೆ

Pinterest LinkedIn Tumblr

1-ashok-kumar-wrestling-WEBನವದೆಹಲಿ: ಮುಂದಿನ ವರ್ಷ ಬ್ರೆಜಿಲ್​ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ರೆಫ್ರಿಗಳನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಪ್ರಕಟಿಸಿದ್ದು, ಭಾರತದ ಅಂತಾರಾಷ್ಟ್ರೀಯ ರೆಫ್ರಿ ಅಶೋಕ್ ಕುಮಾರ್ ಆಯ್ಕೆಯಾಗಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದ ಕುಸ್ತಿ ರೆಫ್ರಿಯೊಬ್ಬರಿಗೆ ಒಲಿಂಪಿಕ್ಸ್ ಗೇಮ್ಸ್​ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ.

ಒಲಿಂಪಿಕ್ಸ್​ಗೆ ಸೂಪರ್​ವೈಸರ್ ಹಾಗೂ ಇನ್ ಸ್ಟ್ರಕ್ಟರ್ ಸೇರಿದಂತೆ ಒಟ್ಟು 50 ರೆಫ್ರಿಗಳನ್ನು ಯುಡಬ್ಲ್ಯುಡಬ್ಲ್ಯುಶನಿವಾರ ಪ್ರಕಟಿಸಿದ್ದು, ಏಷ್ಯಾದಿಂದ ಅಶೋಕ್ ಒಳಗೊಂಡಂತೆ 9 ರೆಫ್ರಿಗಳನ್ನು ಆಯ್ಕೆ ಮಾಡಿದೆ. ಪ್ರಸ್ತುತ ಇಂಡಿಯನ್ ಏರ್ ಫೋರ್ಸ್​ನಲ್ಲಿ ವಾರೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ 50ಕ್ಕೂ ಅಧಿಕ ಪಂದ್ಯಗಳಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಾಸ್ ವೇಗಸ್​ನಲ್ಲಿ ನಡೆದ 2015ರ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ತೋರಿದ ನಿರ್ವಹಣೆಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.

Write A Comment