ರಾಷ್ಟ್ರೀಯ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿದ ರಾಬರ್ಟ ವಾದ್ರಾ

Pinterest LinkedIn Tumblr

vadraನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ‘ಸರಿ-ಬೆಸ ಯೋಜನೆ’ಯಿಂದ ವಿಐಪಿಗಳ ವಾಹನಗಳಿಗೆ ವಿನಾಯಿತಿ ನೀಡಿರುವುದನ್ನು ಖಂಡಿಸಿದ್ದಾರೆ.

ಸರಿ-ಬೆಸ ಯೋಜನೆಯಲ್ಲಿ ವಿನಾಯಿತಿ ನೀಡುವುದು ವಂಚನೆ, ಪ್ರಜೆಗಳ ಉಪಯೋಗಕ್ಕಾಗಿ ಒಂದು ಕಾನೂನು ಜಾರಿಗೆ ತರುವಾಗ ನಾವೆಲ್ಲರೂ ಪಾಲಿಸಬೇಕು. ವಿಐಪಿಗಳಿಗೆ ವಿನಾಯಿತಿ ನೀಡಬಾರದು ಎಂದು ವಾದ್ರಾ ತಮ್ಮ ಫೇಸ್ ಬುಕ್ ಪುಟದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಸರಿ ಬೆಸ ಸಂಖ್ಯೆಗಳುಳ್ಳ ವಾಹನಗಳು ದಿನ ಬಿಟ್ಟು ದಿನ ದೆಹಲಿ ರಸ್ತೆಗಳಿಗಿಳಿಯಬೇಕು ಎಂದು ತೀರ್ಮಾನಿಸಿದ್ದರು. ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ 2 ಸಾವಿರ ರೂಪಾಯಿ ದಂಡ ವಿಧಿಸಬೇಕೆಂದು ಸರ್ಕಾರ ನಿರ್ಣಯಿಸಿದೆ. ಆದರೆ ವಿಐಪಿಗಳಿಗೆ ವಿನಾಯಿತಿ ನೀಡಿದ್ದಾರೆ. ದೆಹಲಿ ಸರ್ಕಾರದ ತೀರ್ಮಾನದ ಕುರಿತು ಪ್ರಜೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ತೊಂದರೆ ಅನುಭವಿಸುತ್ತಾರೆ ಎಂದು ಕಿಡಿಕಾರಿದರು.

Write A Comment