ರಾಷ್ಟ್ರೀಯ

ಮಧ್ಯಪ್ರದೇಶ ಸ್ಥಳೀಯ ಚುನಾವಣೆ ಬಿಜೆಪಿಗೆ ಭಾರೀ ಹಿನ್ನಡೆ : ‘ಕೈ’ ಮೇಲು

Pinterest LinkedIn Tumblr

congಭೋಪಾಲ್, ಡಿ.27-ರಾಜ್ಯದ ಎಂಟು ನಗರ ಪಾಲಿಕೆಗಳಿಗೆ ಡಿ.22ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸಂಸ್ಥೆಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಿದೆ.

ಕಳೆದ 2003 ರಿಂದ ನಗರಾಡಳಿತ ಸಂಸ್ಥೆಗಳಲ್ಲಿ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಭಾರೀ ಜಯ ಸಾಧಿಸಿದೆ. ಕಳೆದ ತಿಂಗಳು ರತ್ಲಂ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ಈ ಬಾರಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 8ರ ಪೈಕಿ 5 ಕಾರ್ಪೊರೇಷನ್‌ಗಳಲ್ಲಿ ಪ್ರಾಬಲ್ಯ ಮೆರೆದಿದ್ದರೆ, ಈ ಹಿಂದೆ ಬಿಜೆಪಿ 7ರಲ್ಲಿ ಅದಿಕಾರ ಹಿಡಿದಿತ್ತು.

ಬಿಜೆಪಿ ಈ ಬಾರಿ ಮಾಂದ್‌ಸಾರ್, ಸೆಹೋರ್ ಮತ್ತು ಷಾಹ್‌ಗಂಜ್‌ಗಳಲ್ಲಷ್ಟೆ ಗೆಲುವು ಕಂಡಿದೆ. ಗೆಲುವೂ ಕೂಡ ತೀರಾ ಕಡಿಮೆ ಅಂತರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment