ರಾಷ್ಟ್ರೀಯ

ಕೋಟ್ಯಧಿಪತಿ ಕಾನ್ಸ್ ಟೇಬಲ್! 4 ಕಾರು, 6 ಮನೆ, 8 ಬ್ಯಾಂಕ್ ಖಾತೆ ಪತ್ತೆ

Pinterest LinkedIn Tumblr

indore-police-raid_650x400_ಇಂದೋರ್: ಈ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಬಡಪಾಯಿಯಲ್ಲ…ಯಾಕೆಂದರೆ ಈತ ಕೋಟ್ಯಧಿಪತಿ ಕಾನ್ಸ್ ಟೇಬಲ್ . ನಾಲ್ಕು ಕಾರು, ಆರು ಮನೆಗಳು ಹಾಗೂ 8 ಬ್ಯಾಂಕ್ ಖಾತೆಗಳು ಪತ್ತೆಯಾಗಿರುವುದಾಗಿ ಮಧ್ಯಪ್ರದೇಶದ ಇಂದೋರ್ ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಭ್ರಷ್ಟಾಚಾರ ನಿಗ್ರಹ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಕಾನ್ಸ್ ಟೇಬಲ್ ಗಳ ಕೋಟ್ಯಂತರ ರೂಪಾಯಿ ಆಸ್ತಿ ಬೆಳಕಿಗೆ ಬಂದಿದೆ. ಸೋಮವಾರ ಬೆಳಗ್ಗೆ ಹೆಡ್ ಕಾನ್ಸ್ ಟೇಬಲ್ ಅರುಣ್ ಸಿಂಗ್ ಮನೆ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

ದಾಖಲೆಗಳ ಪ್ರಕಾರ 6 ಸಾವಿರ ಚದರ ಅಡಿಯ 2 ನಿವೇಶನ, ಫಾರ್ಮ್ ಹೌಸ್ ಹಾಗೂ 2 ಫ್ಲ್ಯಾಟ್ಸ್ ಪತ್ತೆಯಾಗಿದೆ. ಅಷ್ಟೇ ಅಲ್ಲ 25 ಎಕರೆ ಫಾರ್ಮ್ ಹೌಸ್, ರೇವಾದಲ್ಲಿ 8ಸಾವಿರ ಚದರ ಅಡಿಯ ಎರಡು ನಿವೇಶನಗಳ ದಾಖಲೆ ವಶಕ್ಕೆ ತೆಗೆದುಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಎಸ್ ಯುವಿ ಸೇರಿದಂತೆ ನಾಲ್ಕು ಕಾರುಗಳು, 8 ಬ್ಯಾಂಕ್ ಖಾತೆಗಳು ಪತ್ತೆಯಾಗಿದೆ. ಒಟ್ಟು ಸುಮಾರು ಐದು ಕೋಟಿ ರೂಪಾಯಿ ಆಸ್ತಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-ಉದಯವಾಣಿ

Write A Comment