ರಾಷ್ಟ್ರೀಯ

ಕೇರಳದ ಮದ್ಯ ನಿಷೇಧ ನೀತಿಗೆ ಸುಪ್ರೀಂ ಅಂಗೀಕಾರ

Pinterest LinkedIn Tumblr

bar_casefffನವದೆಹಲಿ: ಕೇರಳ ಸರ್ಕಾರ ಜಾರಿ ಮಾಡಿದ್ದ ಮದ್ಯ ನಿಷೇಧ ನೀತಿಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಕೇರಳದಲ್ಲಿರುವ ಪಂಚತಾರ ಹೋಟೆಲ್‌ಗಳಿಗೆ ಮಾತ್ರ ಬಾರ್ ಲೈಸನ್ಸ್ ಎಂಬ ಸರ್ಕಾರದ ನೀತಿಯನ್ನು ಪ್ರಶ್ನಿಸಿ ಬಾರ್ ಮಾಲೀಕರ ಸಂಘ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ನ್ಯಾಯಪೀಠದ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಮತ್ತು ನ್ಯಾಯಮೂರ್ತಿ ಶಿವ ಕೀರ್ತಿ ಸಿಂಗ್ ಕೇರಳ ಸರ್ಕಾರದ ಮದ್ಯ ನಿಷೇಧ ನೀತಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಮದ್ಯ ಮಾರಾಟ ಮಾಡಬೇಕೆಂಬುದು ಹಕ್ಕು ಅಲ್ಲ. ಈ ನೀತಿಗೆ ಸಂಬಂಧಿಸಿದಂತೆ ಮುಚ್ಚಿರುವ ಬಾರ್‌ಗಳನ್ನು ಮತ್ತೆ ತೆರೆಯುವಂತಿಲ್ಲ. ಪಂಚತಾರಾ ಹೋಟೆಲ್‌ಗಳಿಗೆ ಮಾತ್ರ ಬಾರ್ ಪರವಾನಗಿ ನೀಡಿದ್ದು, ಈ ಬಗ್ಗೆ ಕೇರಳ ಸರ್ಕಾರ ನಿಲುವು ಸರಿಯಾಗಿದೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.

ಮದ್ಯ ನಿಷೇಧ ನೀತಿ: ಪ್ರಧಾನ ತೀರ್ಪುಗಳು
2014 ಮಾರ್ಚ್ 31
ಕೇರಳದಲ್ಲಿ ಒಟ್ಟು 740 ಬಾರ್‌ಗಳನ್ನು ಮುಚ್ಚಲಾಯಿತು.
2014 ಏಪ್ರಿಲ್ 01
ಅವ್ಯವಸ್ಥಿತ 418 ಬಾರ್‌ಗಳು ಪರವಾನಗಿ ನವೀಕರಣ ಮಾಡದೇ ಇರುವ ಕಾರಣ ಮುಚ್ಚಲ್ಪಟ್ಟವು. 410 ಬಾರ್‌ಗಳನ್ನು ಇದೇ ದಿನ ಮುಚ್ಚಲಾಯಿತು. 8 ಬಾರ್ ಗಳು ನ್ಯಾಯಾಲಯದ ಮೊರೆ ಹೋದವು. ಉಳಿದಿದ್ದು 312 ಬಾರ್‌ಗಳು
2014 ಅಕ್ಟೋಬರ್ 30
ಸರ್ಕಾರದ ಮದ್ಯ ನಿಷೇಧ ನೀತಿಗೆ ಹೈಕೋರ್ಟ್ ಅಂಗೀಕಾರ. ಟು ಸ್ಟಾರ್, ತ್ರೀ ಸ್ಟಾರ್ ಹೋಟೆಲ್‌ಗಳಿಲ್ಲಿರುವ ಬಾರ್‌ಗಳು ಮತ್ತು ವರ್ಗೀಕರಣಗೊಳಿಸದೇ ಇರುವ 250 ಬಾರ್‌ಗಳನ್ನು ಮುಚ್ಚಲು ಆದೇಶ. ಹೀಗಾಗಿ ಕೇರಳದಲ್ಲಿ ಫೈವ್ ಸ್ಟಾರ್, ಫೋರ್ ಸ್ಟಾರ್, ಹೆರಿಟೇಜ್ ವಿಭಾಗಗಳಲ್ಲಿ ಒಟ್ಟು 62 ಬಾರ್ ಗಳು ಮಾತ್ರ ಉಳಿದವು.
2014 ಅಕ್ಟೋಬರ್ 31
2014 ಅಕ್ಟೋಬರ್ 30ರಂದು ಮುಚ್ಚಲ್ಪಟ್ಟ ಬಾರ್‌ಗಳನ್ನು ಒಂದು ತಿಂಗಳ ಕಾಲ ತೆರೆಯಬಹುದು ಎಂಬ ಆದೇಶ. ಪ್ರಕರಣದ ಮುಂದೂಡಲ್ಪಟ್ಟು ಈ ಆದೇಶ 2015, 31ರ ವರೆಗೆ ಬಾರ್‌ಗಳು ಕಾರ್ಯವೆಸಗಿದವು. ಅದೇ ವೇಳೆ ನ್ಯಾಯಾಲಯದ ಮೆಟ್ಟಲು ಹತ್ತಿದ್ದ 12 ಬಾರ್ ಗಳು ಮತ್ತೆ ತೆರೆಯಲ್ಪಟ್ಟವು.
2015 ಮಾರ್ಚ್ 31
ಪಂಚತಾರಾ ಹೋಟೆಲ್ ಗಳಿಗಿಂತ ಕೆಳಗಿನ ಮಟ್ಟದಲ್ಲಿರುವ ಯಾವುದೇ ಹೋಟೆಲ್ ಗಳಿಗೆ ಬಾರ್ ಲೈಸನ್ಸ್ ನೀಡಬೇಕಾಗಿಲ್ಲ ಎಂಬ ಸರ್ಕಾರ ತೀರ್ಮಾನಕ್ಕೆ ಹೈಕೋರ್ಟ್ ಅಂಗೀಕಾರ. ಈ ತೀರ್ಪಿನಿಂದಾಗಿ ಮಾರ್ಚ್ 31ರಂದು 300 ಬಾರ್‌ಗಳು ಮುಚ್ಚಲ್ಪಟ್ಟವು. ಇದರಲ್ಲಿ 3 ಬಾರ್‌ಗಳಿಗೆ ಮತ್ತೆ ಪರವಾನಗಿ ಸಿಕ್ಕಿ ಕಾರ್ಯವೆಸಗುವಂತಾಯಿತು.
ಇದೀಗ ಕೇರಳದಲ್ಲಿ ಮದ್ಯ ಮಾರಾಟಕ್ಕೆ ಅನುಮತಿಯಿರುವ ಬಾರ್‌ಗಳು
27 ಬಾರ್‌ಗಳು (ಪಂಚತಾರಾ ಹೋಟೆಲ್)
33 ಬಾರ್ ಗಳಿರುವ ಕ್ಲಬ್‌ಗಳು
806 ಬಿಯರ್-ವೈನ್ ಪಾರ್ಲರ್‌ಗಳು

Write A Comment