ರಾಷ್ಟ್ರೀಯ

ಜೀನ್ಸ್, ಸ್ಕರ್ಟ್ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ!

Pinterest LinkedIn Tumblr

TN-Temple-Webಚೆನ್ನೈ: ಜನವರಿ 1 ರಿಂದ ಜೀನ್ಸ್, ಲೆಗ್ಗಿಂಗ್ಸ್, ಸ್ಕರ್ಟ್ ಧರಿಸಿದವರು ತಮಿಳುನಾಡಿನ ದೇವಾಲಯಗಳನ್ನು ಪ್ರವೇಶಿಸುವಂತಿಲ್ಲ. ಹೀಗೆಂದು ತಮಿಳುನಾಡಿದ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹೊಸ ವಸ್ತ್ರ ಸಂಹಿತೆ ಜ.1 ರಿಂದ ಜಾರಿಯಾಗಲಿದೆ ಎಂದು ತನ್ನ ಪ್ರಕಟಣೆಯಲ್ಲಿಅ ಅದು ತಿಳಿಸಿದೆ. ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಿ ಆಗಮಿಸುವಂತೆ ಭಕ್ತಾದಿಗಳಿಗೆ ಸೂಚಿನೆ ನೀಡಿದೆ.

ದೇವಾಲಯ ಪ್ರವೇಶಕ್ಕೆ ವಸ್ತ್ರ ಸಂಹಿತೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಆದರೆ ದೇವಾಲಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿದ್ದವು. ಈಗ ತಮಿಳುನಾಡಿನ ಹಿಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊಸ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದೆ.

ಕೆಲ ದಿನಗಳ ಹಿಂದೆ ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠವು ಹೊಸ ವಸ್ತ್ರ ಸಂಹಿತೆಗೆ ಹಸಿರು ನಿಶಾನೆ ತೋರಿಸಿತ್ತು.

Write A Comment