ರಾಜಮಂಡ್ರಿ : ಈ ವರ್ಷ ಗಣೇಶ ಹಬ್ಬದ ನಿಮಿತ್ತ ನಿರ್ವಿುಸಿದ್ದ ಸುಮಾರು 8 ಸಾವಿರ ಕೆ ಜಿ ತೂಕದ ‘ಲಡ್ಡು’ ಗಿನ್ನೆಸ್ ವಿಶ್ವದಾಖಲೆಗೆ ಸೇರಿದೆ. ಈ ‘ಲಡ್ಡು’ ತಯಾರಕರು ನಿರ್ಮಿಸಿದ ಲಾಡು ಗಿನ್ನೆಸ್ ವಿಶ್ವದಾಖಲೆಗೆ ಸೇರಿದ್ದು ಇದು ಸತತ ಐದನೇ ಬಾರಿ.
ಈ ಮಾದರಿಯ ಸಿಹಿತಿಂಡಿಯಲ್ಲಿ ನಿರ್ವಿುತವಾದ ಅತಿದೊಡ್ಡ ಸಿಹಿತಿಂಡಿಯಾಗಿ ಸತತ 5ನೇ ವರ್ಷ ವಿಶ್ವದಾಖಲೆಯನ್ನು ಈ ಲಾಡು ನಿರ್ವಿುಸಿದೆ. ತಮ್ಮ ಅಂಗಡಿಯ ಕೆಲಸಗಾರರ ಶ್ರಮ ಮತ್ತು ದೇವ ಗಣೇಶ ಮತ್ತು ಜನರ ಕೃಪೆಯಿಂದ 5ನೇ ಬಾರಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದು ಲಾಡು ನಿರ್ವಿುಸಿದ ಶ್ರೀ ಭಕ್ತ ಆಂಜನೇಯ ಸ್ವೀಟ್ಸ್ ಅಂಗಡಿ ಮಾಲೀಕ ತಾಪೇಶ್ವರಮ್ ಹೇಳಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 8 ಸಾವಿರ ಕೆ ಜಿ ತೂಕದ ಮತ್ತು ವಿಜಯವಾಡದಲ್ಲಿ 6 ಸಾವಿರ ಕೆ ಜಿ ತೂಕದ ಲಾಡುಗಳನ್ನು ಪ್ರತ್ಯೇಕವಾಗಿ ನಿರ್ವಿುಸಿದ್ದೆವು, ತಮ್ಮ ಮುಂದಿನ ಗುರಿ 500 ಕೆ ಜಿ ತೂಕದ ಕೋವಾ (ಹಾಲಿ ಮಿಶ್ರಿತ ಸಿಹಿ ತಿಂಡಿ) ಶಿರಡಿ ಸಾಯಿಬಾಬನಿಗೆ ತಯಾರಿಸುವುದು ಎಂದು ಅಂಗಡಿ ಮಾಲಿಕ ತಿಳಿಸಿದ್ದಾರೆ.