ರಾಷ್ಟ್ರೀಯ

ಇನ್ನೂ ತೀವ್ರ ನಿಗಾ ಘಟಕದಲ್ಲಿ ಮುಫ್ತಿ ಮೊಹಮ್ಮದ್ ಸಯೀದ್

Pinterest LinkedIn Tumblr

30-mufti-mohammad-web

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಅಸ್ವಸ್ಥರಾಗಿದ್ದು ಅವರಿಗೆ ‘ಆಕ್ಸಿಜನ್ ತೆರೆಪಿ’ಯ ಅಗತ್ಯವಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ತಜ್ಞರ ತಂಡವೊಂದು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಏಮ್್ಸ ಪ್ರಕಟಣೆಯೊಂದು ಬುಧವಾರ ತಿಳಿಸಿದೆ.

‘ಡಿಸೆಂಬರ್ 24ರಿಂದ ಸಯೀದ್ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಅವರು ಇನ್ನೂ ಅಸ್ವಸ್ತರಾಗಿದ್ದು ಅವರಿಗೆ ಆಕ್ಸಿಜನ್ ತೆರೆಪಿಯ ಅಗತ್ಯವಿದೆ. ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಏಮ್್ಸ ಅಧಿಕಾರಿಗಳು ಹೇಳಿದ್ದಾರೆ.

‘ಸಯೀದ್ ಅವರು ಎಚ್ಚರದಿಂದ ಇದ್ದು, ಮೌಖಿಕವಾಗಿ ಆಹಾರ ಸೇವಿಸುತ್ತಿದ್ದಾರೆ. ಸೋಂಕು ನಿರೋಧಿ ಔಷಧವನ್ನು ಅವರಿಗೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

Write A Comment