ರಾಷ್ಟ್ರೀಯ

ಕೋರ್ಟ್ ಆವರಣದ ಬಳಿ ಟೀ ಮಾರುವವನ ಮಗಳು ನ್ಯಾಯಾಧೀಶೆಯಾದಳು!

Pinterest LinkedIn Tumblr

shruthi_lawಈಕೆಯ ಹೆಸರು ಶ್ರುತಿ. ಪಂಜಾಬ್‌ನ ನಾಕೋದರ್ ನಿವಾಸಿಯಾಗಿರುವ ಈಕೆ ಪಂಜಾಬ್ ಸಿವಿಲ್ ಸರ್ವೀಸ್‌ನ ನ್ಯಾಯಾಧೀಶ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನ್ಯಾಯಾಧೀಶೆಯಾಗಿದ್ದಾಳೆ. ಈಕೆಯ ಅಪ್ಪ ಸುರೇಂದರ್ ಕುಮಾರ್ ಜಲಂಧರ್ ಕೋರ್ಟ್ ಆವರಣ ಬಳಿ ಟೀ ಮಾರುತ್ತಿದ್ದಾರೆ. ಟೀ ಮಾರುವವನ ಮಗಳು ಶ್ರುತಿ ಉನ್ನತ ವಿದ್ಯಾಭ್ಯಾಸ ಪಡೆದು ನ್ಯಾಯಾಧೀಶೆಯಾಗುವ ಮೂಲಕ ನಾಡಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಿದ್ದಾಳೆ.

ಸ್ಟೇಟ್ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿತ ಶ್ರುತಿ ಜಿಎನ್‌ಡಿಯು ಜಲಂಧರ್ ನಲ್ಲಿ ಕಾನೂನು ವ್ಯಾಸಂಗ ಮಾಡಿ ಪಂಜಾಬ್ ವಿವಿಯಿಂದ ಎಲ್‌ಎಲ್‌ಎಂ ಪದವಿ ಪಡೆದಿದ್ದಳು. ಮನೆಯಲ್ಲಿ ಬಡತನವಿದ್ದರೂ ಶ್ರುತಿಯ ಕಲಿಕೆಯನ್ನು ಇದ್ಯಾವುದೂ ಬಾಧಿಸಲೇ ಇಲ್ಲ.

ಜ್ಯುಡಿಷ್ಯಲ್ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ ಮೊದಲ ಪ್ರಯತ್ನದಲ್ಲೇ ಪಂಜಾಬ್ ಸಿವಿಲ್ ಸರ್ವೀಸ್ (ಜ್ಯುಡಿಷ್ಯಲ್) ಪರೀಕ್ಷೆಯನ್ನು ಪಾಸು ಮಾಡಿದ್ದಾಳೆ.

ನನಗೆ ಸಿಕ್ಕಿದ ಅತೀ ದೊಡ್ಡ ಉಡುಗೊರೆ ಇದು. ಆಕೆ ತನ್ನ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತಾಳೆ ಎಂದು ನನಗೆ ಗೊತ್ತಿತ್ತು. ಆದರೆ ಆಕೆ ನ್ಯಾಯಾಧೀಶೆಯಾಗುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತಾರೆ ಶ್ರುತಿಯ ಅಪ್ಪ ಸುರೇಂದರ್ ಕುಮಾರ್.
ಶ್ರುತಿಯ ಸಾಧನೆಗೆ ಸಲಾಂ…

Write A Comment