ರಾಷ್ಟ್ರೀಯ

‘ರಾಮಮಂದಿರ ನಿರ್ಮಾಣ ಖಚಿತ’ : ಕೇಂದ್ರ ಸಚಿವ ಮಹೇಶ್ ಶರ್ಮಾ ಘೋಷಣೆ

Pinterest LinkedIn Tumblr

sharma

ಬುಲಂದ್(ಉತ್ತರ ಪ್ರದೇಶ)ಡಿ.30-ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಕಾಯಬೇಕು ಅಥವಾ ಉಭಯತ್ರ ಪರಸ್ಪರ ಹೊಂದಾಣಿಕೆಗೆ ಬರಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರ ಬಹುದಿನಗಳ ಕನಸಾಗಿದೆ. ಸಾಧ್ಯವಿರುವಷ್ಟೂ ತ್ವರಿತಗತಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಅವರೇ ತಿಳಿಸಿದ್ದಾರೆ. ಈ ವಿಷಯದಲ್ಲಿ ನಮ್ಮ ಪಕ್ಷ ಮತ್ತು ಸರ್ಕಾರಗಳು ತಮ್ಮ ಅನುಮತಿ ನೀಡಿಯಾಗಿದೆ.

ಹಾಗಾಗಿ ಮಂದಿರ ನಿರ್ಮಾಣಕ್ಕೆ ನಾವು ಸಿದ್ದ. ಆದರೆ ನ್ಯಾಯಾಲಯದ ಆದೇಶ ಅಥವಾ ಉಭಯಬಣಗಳ ಹೊಂದಾಣಿಕೆಗಾಗಿ ಕಾಯುತ್ತಿದ್ದೇವೆ. ಆದ್ದರಿಂದ ಕೆಲಸ ಮಾಡಲು ಜನ ಸಹಕರಿಸಬೇಕು ಎಂದು ಸಚಿವ ಶರ್ಮಾ ಹೇಳಿದ್ದಾರೆ. ಇಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಧ್ಯಕ್ಕೆ ಈ ವಿವಾದ ನ್ಯಾಯಾಲಯದಲ್ಲಿ ನೆನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.

Write A Comment