ರಾಷ್ಟ್ರೀಯ

ಜೇಟ್ಲಿ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ; ಮೋದಿ ಮೂರ್ಖನನ್ನಾಗಿ ಮಾಡಿದ್ದಾರೆ: ಜೇಠ್ಮಲಾನಿ

Pinterest LinkedIn Tumblr

ram-jethmalaniಹೊಸದಿಲ್ಲಿ,ಡಿ.31: ‘‘ನಾನೊಬ್ಬ ವಿದ್ಯಾವಂತ ಮನುಷ್ಯ. ಕ್ರಿಮಿನಲ್ ಲಾಯರ್ ಆಗಿ 75 ವರ್ಷ ಅನುಭವಿ ಹೊಂದಿದ್ದರೂ, ಪ್ರಧಾನಿ ಮೋದಿ ನನ್ನನ್ನು ಮೂರ್ಖನನ್ನಾಗಿ ಮಾಡಿದ್ದಾರೆ ’ ‘ಹೀಗೆಂದವರು ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೋದಿ ಮತ್ತು ಸಚಿವ ಅರುಣ್ ಜೇಟ್ಲಿ ವಿರುದ್ಧ ಗುಡುಗಿರುವ ಜೇಠ್ಮಲಾನಿ ‘‘2014ರ ಚುನಾವಣೆಯಲ್ಲಿ ಮೋದಿ ಪರವಾಗಿ ಕೆಲಸ ಮಾಡಿದ್ದರೂ ನನ್ನನ್ನು ಬಿಜೆಪಿಯಿಂದ ಹೊರದಬ್ಬಲಾಯಿತು’’ ಎಂದು ಹೇಳಿದರು.

ಸಚಿವ ಅರುಣ್ ಜೇಟ್ಲಿ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

‘‘ಕಳೆದ ಬಿಹಾರ ಚುನಾವಣೆಯ ವೇಳೆ ನಿತೀಶ್ ಕುಮಾರ್ ನನ್ನನ್ನು ಆಹ್ವಾನಿಸಿದ್ದರು.ನನಗೆ ಪ್ರಚಾರ ನಡೆಸಲು ಹೆಚ್ಚು ಸಮಯ ಇರಲಿಲ್ಲ. ಆದರೂ ಎರಡು ಸಭೆಗಳಲ್ಲಿ ಭಾಗವಹಿಸಿದ್ದೆ. ನಿತೀಶ್ ಹಾಗೂ ಲಾಲು ಅವರನ್ನು ಬೆಂಬಲಿಸುವಂತೆ ಕರೆ ನೀಡಿದ್ದೆ.ಎನ್‌ಡಿಎಗೆ ಜನರಿಗೆ ದ್ರೋಹ ಮಾಡಿದೆ. ಅದಕ್ಕೆ ಮತ ನೀಡಬೇಡಿ. ನಾನು ನಿಮ್ಮಲ್ಲಿಗೆ ಕ್ಷಮೆಯಾಚಿಸಲು ಬಂದಿರುವುದಾಗಿ ಹೇಳಿದ್ದೆ ’’ ಎಂದು ಜೇಠ್ಮಲಾನಿ ತಿಳಿಸಿದರು.

‘‘ ಯುಪಿಎ ಸರಕಾರ ಏನನ್ನು ಮಾಡಲಿಲ್ಲ. ಈ ಕಾರಣದಿಂದಾಗಿ ಜನರು ಅದನ್ನು ಅಧಿಕಾರದಿಂದ ಕೆಳಗಿಳಿಸಿದರು. ವಿಪಕ್ಷ ಈಗ ಏನು ಮಾಡುತ್ತಿದೆ ? ಅಧಿಕಾರಕ್ಕೆ ಬಂದ ನಂತರ ಮೋದಿ ಸರಕಾರ ಏನನ್ನು ಮಾಡಿಲ್ಲ. ಮೋದಿ ಜರ್ಮನಿಗೆ ಹೋದರು.ಜರ್ಮನಿಯ ಚಾನ್ಸ್‌ಲರ್ ಭಾರತಕ್ಕೆ ಬಂದರು. ಆದರೆ ಪರಸ್ಪರ ಹೆಸರೇನೆಂದು ಕೇಳಲಿಲ್ಲ. ಯಾಕೆಂದರೆ ಅವರು ತಮ್ಮ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಬಯಸುತ್ತಿಲ್ಲ.

ಯುಪಿಎ ಸರಕಾರದ ಭ್ರಷ್ಟಾಚಾರ , ವೈಫಲ್ಯವನ್ನು ಮುಂದಿಟ್ಟು ಮತಯಾಚಿಸಿದ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಚುನಾವಣೆಯ ಮೊದಲು ಬಿಜೆಪಿಯ ನಾಯಕರು ಭ್ರಷ್ಟಾಚಾರದ ಬಗ್ಗೆ ಮತ್ತು ವಿದೇಶದಿಂದ ಕಪ್ಪು ಹಣವನ್ನು ತರುವ ಬಗ್ಗೆ ಜನರನ್ನು ನಂಬಿಸಿದ್ದರು. ಆದರೆ ಈಗ ವೌನವಾಗಿದ್ಧಾರೆ. ಜನರಿಗೆ ಮೋಸ ಮಾಡಿದ್ದಾರೆ ಎಂದು ಜೇಠ್ಮಲಾನಿ ಅಪಾದಿಸಿದರು.

Write A Comment