ರಾಷ್ಟ್ರೀಯ

114 ಹರೆಯದ ಸ್ವಾತಂತ್ರ ಯೋಧ ಖಾದ್ರಿ ವಿಧಿವಶ

Pinterest LinkedIn Tumblr

khadriಕೋಲ್ಕತಾ, ಡಿ.31: ಮಹಾತ್ಮಾ ಗಾಂಧಿ ಜೊತೆ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಕಟಕ್‌ನಲ್ಲಿ ಹಲವು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ಸ್ವಾತಂತ್ರ ಹೋರಾಟಗಾರಸೆಯ್ಯದ್ ಮುಹಮ್ಮದ್‌ ಶರ್ಫುದ್ದೀನ್‌ ಖಾದ್ರಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ನಾಲ್ಕು ದಿನಗಳ ಹಿಂದೆ ಅವರು 114ನೆ ಜನ್ಮದಿನವನ್ನು ಆಚರಿಸಿದ್ದರು. ರಿಪ್ಪನ್ ಸ್ಟ್ರೀಟ್‌ನಲ್ಲಿ ಹಕೀಮ್ ಸಾಹೇಬ್ ಎಂದೇ ಚಿರಪರಿಚಿತರಾಗಿರುವ ಸೆಯ್ಯದ್ ಮುಹಮ್ಮದ್‌ ಶರ್ಫುದ್ದೀನ್‌ ಖಾದ್ರಿ ಅವರಿಗೆ 2007ರಲ್ಲಿ ದೇಶದ ಉನ್ನತ ನಾಗರಿಕ ಪುರಸ್ಕಾರ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು.

ಯುನಾನಿ ವೈದ್ಯರಾಗಿದ್ದ ಖಾದ್ರಿ ಕೋಲ್ಕತಾದಲ್ಲಿ ಯುನಾನಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1901, ಡಿಸೆಂಬರ್ 25ರಂದು ಬಿಹಾರದ ನವಾಡ ಜಿಲ್ಲೆಯ ಅತ್ಯಂತ ಹಿಂದುಳಿದ ಗ್ರಾಮ ಕುಮ್ರಾವದಲ್ಲಿ ಜನಿಸಿದ್ದರು. 1930ರಲ್ಲಿ ಅವರ ಕುಟುಂಬ ಕೋಲ್ಕತಾಕ್ಕೆ ಸ್ಥಳಾಂತರಗೊಂಡಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಬಿಹಾರದಲ್ಲಿ ಯುನಾನಿ ವೈದ್ಯರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತನ್ನ ಮನೆಗೆ ಆಹ್ವಾನಿಸಿದ್ದರು.

Write A Comment