ರಾಷ್ಟ್ರೀಯ

ಪೆಟ್ರೋಲ್‌ ಬೆಲೆ 63 ಪೈಸೆ, ಡೀಸೆಲ್‌ 1.06 ರು. ಇಳಿಕೆ

Pinterest LinkedIn Tumblr

PETROL_1_1127717f

ನವದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಯುತ್ತಿರುವ ಕಾರಣ ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಇಳಿಕೆ ಮಾಡಿವೆ.

ಒಂದು ಲೀಟರ್ ಪೆಟ್ರೋಲ್‌ ದರದಲ್ಲಿ 63 ಪೈಸೆ ಮತ್ತು ಡೀಸೆಲ್‌ ದರದಲ್ಲಿ 1.06 ರು. ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪೆಟ್ರೋಲ್ ದರ ಇಳಿಕೆಗೆ ರುಪಾಯಿ ಮೌಲ್ಯ ಏರಿಕೆ ಕೂಡ ಕಾರಣ ಎಂದು ಹೇಳಲಾಗುತ್ತಿದ್ದು, ಪ್ರತಿ ಡಾಲರ್ ಗೆ 66.39 ರು ಇದ್ದ ರುಪಾಯಿ ಮೌಲ್ಯ ಇದೀಗ 66.15ಕ್ಕೆ ಏರಿಕೆಯಾಗಿದೆ. ಕಳೆದ ಡಿಸೆಂಬರ್ 15ರಂದು ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು.

ಪೆಟ್ರೋಲ್‌ ಬೆಲೆ ನಿಗದಿ ಸರ್ಕಾರದಿಂದ ನಿಯಂತ್ರಣ ಮುಕ್ತವಾಗಿದ್ದು, ಎನ್‌ಡಿಎ ಸರ್ಕಾರ ಬಂದ ನಂತರದ ಸತತ 8ನೇ ಇಳಿಕೆಯಾಗಿದೆ. ಇನ್ನು ಡೀಸೆಲ್‌ ಬೆಲೆಯನ್ನು ಇತ್ತೀಚೆಗಷ್ಟೇ ನಿಯಂತ್ರಣ ಮುಕ್ತಗೊಳಿಸಲಾಗಿದ್ದು, ಇದಾದ ನಂತರದ 4ನೇ ಇಳಿಕೆಯಾಗಿದೆ. ಕೆಲ ತಿಂಗಳ ಹಿಂದೆ 110 ಡಾಲರ್‌ ಇದ್ದ ಪ್ರತಿ ಬ್ಯಾರಲ್‌ ಕಚ್ಚಾ ತೈಲ ಬೆಲೆ ಈಗ 36.66 ಡಾಲರ್‌ಗೆ ಇಳಿದಿರುವುದೇ ಈ ಬೆಲೆ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

Write A Comment