ರಾಷ್ಟ್ರೀಯ

ಕಾಶ್ಮೀರ ಬಾವುಟಕ್ಕೆ ರಾಷ್ಟ್ರಧ್ವಜದ ಸಮಾನ ಸ್ಥಾನ ಆದೇಶಕ್ಕೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆಯಾಜ್ಞೆ

Pinterest LinkedIn Tumblr

Jammu-kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ವಾಹನ ಹಾಗೂ ಸರ್ಕಾರದ ಕಟ್ಟಡಗಳಲ್ಲಿ ಬಳಕೆ ಮಾಡುವ ಧ್ವಜದ ಬಗ್ಗೆ ಹೊಸ ಗೊಂದಲವೊಂದು ಉಂಟಾಗಿದೆ.

ಸರ್ಕಾರಿ ಕಟ್ಟಡ, ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಗೂ ರಾಜ್ಯದ ಧ್ವಜವನ್ನು ಹಾಕಬೇಕು ಎಂದು ಡಿ.27 ರಂದು ಜಮ್ಮು-ಕಾಶ್ಮೀರ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಇದೇ ಆದೇಶಕ್ಕೆ ಈಗ ತಡೆ ನೀಡಲಾಗಿದೆ.

ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನು ಸಾಂವಿಧಾನಿಕ ಸಂಸ್ಥೆಗಳ ಅಧಿಕೃತ ಕಚೇರಿಗಳು ಹಾಗೂ ವಾಹನಗಳ ಮೇಲೆ ಆರೋಹಿಸುವಂತೆ ನೀಡಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್‌ ಆದೇಶವನ್ನು ಬಿಜೆಪಿ ಪ್ರಶ್ನಿಸಿತ್ತು.

ಸಂವಿಧಾನದ 370 ನೇ ವಿಧಿ ಪ್ರಕಾರ ರಾಷ್ಟ್ರಧ್ವಜದೊಂದಿಗೆ ರಾಜ್ಯಧ್ವಜವನ್ನೂ ಆರೋಹಿಸುವ ಅಧಿಕಾರ ಭಾರತದಲ್ಲಿ ಜಮ್ಮು-ಕಾಶ್ಮೀರಕ್ಕೆ ಮಾತ್ರ ನೀಡಲಾಗಿತ್ತು. ಆದರೆ ಈಗ ಹೈಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿದೆ. ಸಾಂವಿಧಾನಿಕ ಸಂಸ್ಥೆಗಳ ಕಚೇರಿ ಹಾಗೂ ವಾಹನಗಳ ಮೇಲೆ ರಾಷ್ಟ್ರಧ್ವಜದ ಜತೆಗೆ ರಾಜ್ಯ ಧ್ವಜವನ್ನೂ ಹಾರಾಟ ಮಾಡಬೇಕು ಎಂದು ಜಮ್ಮು-ಕಾಶ್ಮೀರದ ಪಿಡಿಪಿ- ಬಿಜೆಪಿ ಸಮ್ಮಿಶ್ರ ಸರ್ಕಾರ ಮಾ.12 ರಂದು ಸುತ್ತೋಲೆ ಹೊರಡಿಸಿತ್ತು.

ಆದರೆ ಒಂದೇ ದೇಶದಲ್ಲಿ 2 ಧ್ವಜ ಬೇಡ ಎಂದು ಬಿಜೆಪಿ ನಿಲುವು ತಳೆದಿತ್ತು. ಹೀಗಾಗಿ ಸರ್ಕಾರ ಮಾ.12ರ ಸುತ್ತೋಲೆಯನ್ನು ಮರುದಿನವೇ ಹಿಂಪಡೆದಿತ್ತು. ಇದರ ವಿರುದ್ಧ ಅಬ್ದುಲ್‌ ಖಯೂಂ ಖಾನ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

Write A Comment