ರಾಷ್ಟ್ರೀಯ

ದೆಹಲಿ ಸರ್ಕಾರದ ನಡೆ ಇತರೆ ದೇಶಗಳಿಗೆ ಪ್ರೇರಣೆ: ಕೇಜ್ರಿವಾಲ್

Pinterest LinkedIn Tumblr

kejriwal

ನವದೆಹಲಿ: ವಾಯುಮಾಲಿನ್ಯ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಇಟ್ಟ ನಡೆ ಮುಂದಿನ 5 ವರ್ಷಗಳಲ್ಲಿ ಇತರೆ ದೇಶಗಳಿಗೂ ಪ್ರೇರಣೆಯಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.

ಹಲವು ಟೀಕೆ ಹಾಗೂ ವಿರೋಧ ನಡುವೆಯೂ ದೆಹಲಿ ಸರ್ಕಾರ ತೆಗೆದುಕೊಂಡಿದ್ದ ಸಮ ಮತ್ತು ಬೆಸ ಸಂಖ್ಯೆ ನಿಯಮದ ನಿರ್ಧಾರವನ್ನು ಇಂದು ಜಾರಿಗೆ ತಂದಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ನಾವು ತೆಗೆದುಕೊಂಡ ಜವಾಬ್ದಾರಿಗೆ ಈ ವರೆಗೂ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆಗಳಲ್ಲಿ ಕಾರುಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮ ನಿರ್ಧಾರ ಯಶಸ್ಸು ಕಾಣುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ನಿರ್ಧಾರವನ್ನು ದೆಹಲಿ ಜನತೆ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ಇನ್ನು 5 ವರ್ಷಗಳಲ್ಲಿ ಇತರೆ ದೇಶಗಳಿಗೂ ನಮ್ಮ ನಿರ್ಧಾರ ಪ್ರೇರಣೆಯಾಗಲಿದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ. ಈ ವರೆಗಿನ ಬೆಳವಣಿಗೆಯನ್ನು ಇತರರಿಗೆ ಪ್ರೇರಣೆಯಾಗಲಿದೆ. ಜನರ ಪ್ರತಿಕ್ರಿಯೆ ನನ್ನಲ್ಲಿನ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ದೆಹಲಿ ಜನತೆ ಅಸಾಧ್ಯವಾದುದನ್ನು ಸಾಧ್ಯವಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ.

Write A Comment