ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಮತ್ತೆ ಹೆಚ್ಚಳ

Pinterest LinkedIn Tumblr

petrol-price-hiked

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಮತ್ತೆ ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್‌ಗೆ ಪೆಟ್ರೋಲ್ ಗೆ 0.37 ಪೈಸೆ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ 2 ರುಪಾಯಿ ಹೆಚ್ಚಿಸಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದನೆ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ.

ಬ್ರ್ಯಾಂಡೆಡ್‌ರಹಿತ ಪೆಟ್ರೋಲ್‌ ಮೇಲಿನ ಮೂಲ ಅಬಕಾರಿ ಸುಂಕವನ್ನು ರು. 7.36ರಿಂದ ರು.7.73ಕ್ಕೆ ಮತ್ತು ಬ್ರ್ಯಾಂಡೆಡ್‌ರಹಿತ ಡೀಸೆಲ್‌ ಮೇಲಿನ ಸುಂಕವನ್ನು ರು,5.83 ರಿಂದ ರು 7.83ಕ್ಕೆ ಹೆಚ್ಚಿಸಲಾಗಿದೆ.

ತೈಲ ಕಂಪನಿಗಳು ಕಳೆದ ಗುರುವಾರವಷ್ಟೇ ಪೆಟ್ರೋಲ್ ಬೆಲೆಯಲ್ಲಿ 63 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು ರು.1.06 ರಷ್ಟು ಕಡಿತಗೊಳಿಸಿದ್ದವು.

ಕಚ್ಚಾ ತೈಲದ ಬೆಲೆ ಕಡಿಮೆಯಾಗಿರುವುದರಿಂದ ಕೇಂದ್ರ ಸರ್ಕಾರ ಕಳೆದ ತಿಂಗಳ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 30 ಪೈಸೆ ಹಾಗೂ ಡೀಸೆಲ್ ಮೇಲೆ 1.17 ರುಪಾಯಿ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಹೆಚ್ಚುವರಿಯಾಗಿ 2,500 ಕೋಟಿ ರುಪಾಯಿ ಸಂಗ್ರಹಿಸಿತ್ತು.

Write A Comment