ರಾಷ್ಟ್ರೀಯ

ಭಾರತದ ಜೈಲಲ್ಲಿರುವ 189 ಪಾಕಿಸ್ತಾನ ಕೈದಿಗಳು ಕಾಣೆಯಾಗಿದ್ದಾರೆ!

Pinterest LinkedIn Tumblr

Indo-Pak-Jail

ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನದ ಜತೆ ಬಾಂಧವ್ಯ ವೃದ್ಧಿಯಾಗುವ ಮುನ್ಸೂಚನೆಯ ನಡುವೆಯೇ ಉಭಯ ರಾಷ್ಟ್ರಗಳು ವಿನಿಮಯ ಮಾಡಿಕೊಂಡಿರುವ ಅಂಕಿ-ಅಂಶಗಳ ವರದಿಯ ಪ್ರಕಾರ ಭಾರತದಲ್ಲಿ 189 ಪಾಕಿಸ್ತಾನಿ ಕೈದಿಗಳು ತಪ್ಪಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ರಾಜತಾಂತ್ರಿಕ ಮಾರ್ಗದಲ್ಲೇ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಶುಕ್ರವಾರ ನವದೆಹಲಿ ಮತ್ತು ಇಸ್ಲಾಮಾಬಾದ್​ನಲ್ಲಿ ಏಕಕಾಲದಲ್ಲಿ ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಂಡಿದ್ದು, ಇದರಲ್ಲಿ ಈ ಮಾಹಿತಿ ಸೇರಿರುವುದು ಬಹಿರಂಗಗೊಂಡಿದೆ. ಎರಡು ದೇಶಗಳ ನಡುವೆ 2008, ಮೇ 31ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ವರ್ಷದಲ್ಲಿ ಎರಡು ಸಲ ಈ ರೀತಿ ಕೈದಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಶುಕ್ರವಾರ ವಿನಿಮಯ ಮಾಡಿಕೊಳ್ಳಲಾದ ವರದಿಯ ಪ್ರಕಾರ ಮೀನುಗಾರರು ಸೇರಿದಂತೆ ಒಟ್ಟು 189 ಪಾಕಿಸ್ತಾನಿ ಕೈದಿಗಳ ವಿವರ ಪಟ್ಟಿಯಲ್ಲಿಲ್ಲ ಎನ್ನುವುದು ಪಾಕ್ ಆಕ್ಷೇಪವಾಗಿದೆ. ಪಾಕ್ ದೂರು ಹೌದೇ ಆದಲ್ಲಿ ಎಲ್ಲಿ ನಾಪತ್ತೆಯಾದರು ಎನ್ನುವುದು ಬಹಿರಂಗಗೊಳ್ಳಬೇಕಿದೆ. ಪಾಕಿಸ್ತಾನದ ಪ್ರಕಾರ ಭಾರತದ ಜೈಲುಗಳಲ್ಲಿರುವ ಪಾಕ್ ಕೈದಿಗಳ ಸಂಖ್ಯೆ 460. ಇವರಲ್ಲಿ 113 ಮಂದಿ ಮೀನುಗಾರರೇ ಆಗಿದ್ದಾರೆ. ಆದರೆ ಭಾರತ ನೀಡಿರುವ ಮಾಹಿತಿ ಪ್ರಕಾರ ಒಟ್ಟು ಕೈದಿಗಳ ಸಂಖ್ಯೆ 271.

Write A Comment