ಅಂತರಾಷ್ಟ್ರೀಯ

ಭಾರತದಿಂದ ತಾಳ್ಮೆಯ ನಡೆ

Pinterest LinkedIn Tumblr

Rajnath singh

ನವದೆಹಲಿ: ಪಠಾಣ್ ಕೋಟ್ ವಾಯು ನೆಲೆಯ ಮೇಲೆ ಪಾಕ್ ಮೂಲದ ಉಗ್ರರು ನಡೆಸಿರುವ ದಾಳಿ ಕುರಿತಂತೆ ಸರಕಾರ ಪಾಕ್ ಅನ್ನು ನೇರವಾಗಿ ದೂಷಿಸದೆ ಸಂಯಮವನ್ನು ತೋರಿದೆ.

ಈ ಘಟನೆಯ ಕುರಿತಂತೆ ಗೃಹ ಸಚಿವ ರಾಜ್‌ನಾಥ್‌ಸಿಂಗ್ ನೀಡಿರುವ ಹೇಳಿಕೆಯಲ್ಲಾಗಲಿ ಅಥವಾ ಪ್ರಧಾನಿ ಮೋದಿ ಅವರ ಹೇಳಿಕೆಯಲ್ಲಾಗಲಿ ಎಲ್ಲಾ ಪಾಕಿಸ್ತಾನದ ಪ್ರಸ್ತಾಪ ಇಲ್ಲ, `ಇಂತ ದಾಳಿಕೋರರಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮ್ಮ ಸೇನೆ ಪಡೆಗೆ ಇದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ವಾಯುನೆಲೆಯಲ್ಲಿ ಆಗಬಹುದಾಗಿದ್ದ ಅನಾಹುತವನ್ನು ತಡೆದು, ದಾಳಿಕೋರ ಸದೆಬಡಿದ ಸೇನಾ ಪಡೆ ಯೋಧರ ಕಾರ್ಯವನ್ನು ಶ್ಲಾಘಿಸಿದ್ದಾರೆ ಹಾಗೂ ಅಭಿನಂದಿಸಿದ್ದಾರೆ. `ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ. ಉಗ್ರರ ಕುರಿತ ಪ್ರಮುಖ ವಿಷಯದೊಂದಿಗೆ ಪಾಕ್‌ನೊಂದಿಗೆ ಮಾತುಕತೆ ನಡೆಯುತ್ತದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇ‌ಕರ್ ಹೇಳಿದ್ದಾರೆ.

ಉತ್ತಮ ಸಂಬಂಧಿಗಳನ್ನು ವೃದ್ಧಿಗೊಳ್ಳಲು ಮತ್ತು ನಿಂತುಹೋಗಿರುವ ಕತೆಯನ್ನು ಮುಂದುವರೆಸುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಲಾಹೋರ್‌ಗೆ ದಿಢೀರನೆ ಭೇಟಿ ನೀಡಿದ್ದರು. ಆದರೆ, ನಿನ್ನೆಯ ಪಠಾಣ್‌ಕೋಟ್ ಉಗ್ರರ ದಾಳಿ ಮೋದಿ ಅವರ ಯತ್ನಕ್ಕೆ ತಣ್ಣೀರು ಎರಚಿದಂತಾಗಿದೆ ಎಂದೂ ಕೆಲ ರಾಜಕೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment