ರಾಷ್ಟ್ರೀಯ

ಆರ್‌ಎಸ್‌ಎಸ್ ನ ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಚಿಂತನೆ

Pinterest LinkedIn Tumblr

RSS

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಈ ಸಂಬಂಧ ಕ್ರಿಶ್ಚಿಯನ್ ನಾಯಕರೊಂದಿಗೆ ಸಭೆ ಸಹ ನಡೆಸಿದೆ.

ಮೂಲಗಳ ಪ್ರಕಾರ, ದಶಕಗಳ ಹಿಂದೆ ಸ್ಥಾಪನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಮಾದರಿಯಲ್ಲಿ ಕ್ರಿಶ್ಚಿಯನ್ ಘಟಕ ಸ್ಥಾಪನೆಗೆ ಆರ್‌ಎಸ್‌ಎಸ್ ಮುಂದಾಗಿದ್ದು, ಇದಕ್ಕೆ ಇನ್ನೂ ಹೆಸರು ಅಂತಿಮವಾಗಿಲ್ಲ.

ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮಾರ್ಗದರ್ಶಕರಾಗಿರುವ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರೊಬ್ಬರು ಕ್ರಿಶ್ಚಿಯನ್ ಘಟಕ ಸ್ಥಪಾನೆಯನ್ನು ಖಚಿತಪಡಿಸಿದ್ದು, ಈ ಸಂಬಂಧ ಡಿಸೆಂಬರ್ 17, 2015ರಂದು ಕ್ರಿಶ್ಚಿಯನ್ ನಾಯಕರೊಂದಿಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 17ರಂದು ನಡೆದ ಸಭೆಯಲ್ಲಿ 10ರಿಂದ 12 ರಾಜ್ಯಗಳ ನಾಲ್ಕೈದು ಅರ್ಚ್‌ಬಿಷಪ್ಸ್, 40-50 ರೆವೆರೆಂಡ್ ಬಿಷಪ್ಸ್‌ಗಳು ಭಾಗವಹಿಸಿದ್ದರು. ಈ ವೇಳೆ ಚಳವಳಿಯೊಂದನ್ನು ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಮತ್ತು ಈ ಮೂಲಕ ಒಂದು ಸಂಘಟನೆ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಯಿತು ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರತಿನಿಧಿ ಇಂದ್ರೇಶ್ ಕುಮಾರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Write A Comment