ರಾಷ್ಟ್ರೀಯ

ಪಠಾಣ್‌ಕೋಟ್ ದಾಳಿ ನಡೆಸಿದ್ದು ಯುನೈಟೆಡ್ ಜಿಹಾದ್ ಕೌನ್ಸಿಲ್?

Pinterest LinkedIn Tumblr

Pathankot_armyಶ್ರೀನಗರ: ಪಠಾಣ್‌ಕೋಟ್ ವಾಯುನೆಲೆಯಲ್ಲಿ ನಡೆದ ದಾಳಿಯ ಹೊಣೆಯನ್ನು ಯುನೈಟೆಡ್ ಜಿಹಾದ್ ಕೌನ್ಸಿಲ್ ಹೊತ್ತುಕೊಂಡಿದೆ. ಜಿಹಾದ್ ಕೌನ್ಸಿನ್ ಕಾಶ್ಮೀರದ ಕೆಲವು ಮಾಧ್ಯಮಗಳಿಗೆ ಫೋನ್ ಮಾಡಿ ಈ ವಿಷಯ ಹೇಳಿದ್ದಾಗಿ ಅಲ್ಲಿನ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಪಠಾಣ್‌ಕೋಟ್‌ನಲ್ಲಿ ದಾಳಿಯಲ್ಲಿ ಜಿಹಾದಿ ಕೌನ್ಸಿಲ್‌ನ ಹೈವೇ ಸ್ಕ್ವಾಡ್ ಎಂಬ ಉಗ್ರ ಗುಂಪಿನ ಕೈವಾಡವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನದ 13 ಉಗ್ರ ಸಂಘಟನೆಗಳು ಒಟ್ಟು ಸೇರಿ 1995ರಲ್ಲಿ ಯುನೈಟೆಡ್ ಜಿಹಾದ್ ಕೌನ್ಸಿಲ್ ರೂಪಿಸಿದ್ದವು. ಹಿಜಾಬುರ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಈಗ ಈ ಕೌನ್ಸಿಲ್‌ನ ಚೇರ್‌ಮೆನ್ ಆಗಿದ್ದಾರೆ.

ಲಷ್ಕರೆ ತೊಯ್ಬಾ, ಹಿಜಾಬುಲ್ ಮುಜಾಹಿದ್ದೀನ್, ಹರ್‌ಕತುಲ್ ಮುಜಾಹಿದ್ದೀನ್, ಅಲ್ ಬದರ್ ತೆಹ್ರೀಕಿ ಜಿಹಾದ್ ಎಂಬೀ ಸಂಘಟನೆಗಳು ಈ ಕೌನ್ಸಿಲ್‌ನಲ್ಲಿ ಪ್ರಧಾನ ಪಾತ್ರವಹಿಸಿವೆ. ಇದರಲ್ಲಿರುವ ಹೆಚ್ಚಿನ ಸಂಘಟನೆಗಳಿಗೆ ಅಮೆರಿಕ ಮತ್ತು ವಿಶ್ವಸಂಸ್ಥೆ ನಿಷೇಧ ಹೇರಿದೆ.

Write A Comment