ರಾಷ್ಟ್ರೀಯ

ಎನ್‌ಐಎ ತಂಡದಿಂದ ಪಠಾಣ್‌ಕೋಟ್ ಉಗ್ರರ ದಾಳಿ ತನಿಖೆ

Pinterest LinkedIn Tumblr

niaಪಠಾಣ್‌ಕೋಟ್, ಜ.5-ಪಾಕ್ ಮೂಲದ ಉಗ್ರರ ದಾಳಿಗೆ ಗುರಿಯಾದ ಪಠಾಣ್‌ಕೋಟ್ ವಾಯುನೆಲೆಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಭೇಟಿಯ ಬೆನ್ನಲ್ಲೇ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ದ ತನಿಖೆಯು ಆರಂಭಗೊಂಡಿದೆ.

ಈಗಾಗಲೇ ರಾಷ್ಟ್ರೀಯ ತನಿಖಾ ದಳದ 20 ಜನರ ತಂಡ ಪಠಾಣ್‌ಕೋಟ್ ವಾಯು ನೆಲೆಗೆ ಆಗಮಿಸಿದ್ದು, ಉಗ್ರರ ದಾಳಿಯ ಕುರಿತಂತೆ ವಿಶೇಷ ತನಿಖೆ ಕೈಗೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆ ನಿನ್ನೆ ತನಿಖೆಗಾಗಿ ಎನ್‌ಐಎ ತಂಡವನ್ನು ರಚಿಸಿತ್ತು.

ಈ ತಂಡದಲ್ಲಿ ವಿಶೇಷ ಅಧಿಕಾರಿಗಳೂ ಸೇರಿದಂತೆ 20 ಸದಸ್ಯರಿದ್ದು, ಘಟನೆಯ ಎಲ್ಲಾ ಪೂರ್ವಾಪರಗಳನ್ನು ಸಮಗ್ರವಾಗಿ ತನಿಖೆ ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Write A Comment