ರಾಷ್ಟ್ರೀಯ

‘ಕಮಾಂಡರ್ ಸಾಹಿಬ್’ ಜತೆ ನಿರಂತರ ಸಂಪರ್ಕದಲ್ಲಿದ್ದ ಉಗ್ರರು!

Pinterest LinkedIn Tumblr

1-Millitants-WEBಪಠಾಣ್​ಕೋಟ್: ಪಠಾಣ್​ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸುವ ಮುನ್ನ ಎಸ್​ಪಿ ಕಾರನ್ನು ಅಪಹರಿಸಿದ ಉಗ್ರರು ನಿರಂತರವಾಗಿ ಪಾಕಿಸ್ತಾನದಲ್ಲಿರುವ ಸೂತ್ರಧಾರ ‘ಕಮಾಂಡರ್ ಸಾಹಿಬ್’ ಜತೆ ಸಂಪರ್ಕದಲ್ಲಿದ್ದರು. ಅಲ್ಲಿಂದ ಸಲಹೆಗಳನ್ನು ಪಡೆಯುತ್ತಿದ್ದರು.

ಈ ವಿಷಯವನ್ನು ಎಸ್​ಪಿ ಸಲ್ವಿಂದರ್ ಸಿಮಗ್ ಅವರೊಂದಿಗೆ ಅಪಹರಣಕ್ಕೊಳಗಾಗಿದ್ದ ಅವರ ಸ್ನೇಹಿತ ರಾಜೇಶ್ ವರ್ಮಾ ತಿಳಿಸಿದ್ದಾರೆ. ಡ್ರೖೆವರ್ ಸೀಟ್ ಪಕ್ಕ ಕುಳಿತಿದ್ದ ಉಗ್ರರ ನಾಯಕ ‘ಮೇಜರ್ ಸಾಹಿಬ್’ ತನ್ನ ಸೂತ್ರಧಾರನೊಂದಿಗೆ ಪ್ರತೀ 10 ನಿಮಿಷಕ್ಕೊಮ್ಮೆ ಮಾತುಕತೆ ನಡೆಸುತ್ತಿದ್ದರು. ನಾವು ಕಾರಿನಲ್ಲಿದ್ದಷ್ಟು ಸಮಯ ಬಹಳಷ್ಟು ಬಾರಿ ಕರೆ ಮಾಡಿ ಮಾತನಾಡಿದ್ದರು. ಅವರು ಸಂಪೂರ್ಣವಾಗಿ ಉರ್ದುವಿನಲ್ಲಿ ಮಾತನಾಡುತ್ತಿದ್ದರು ಹಾಗಾಗಿ ನನಗೆ ಅವರ ಮಾತು ಸಂಪೂರ್ಣವಾಗಿ ಅರ್ಥವಾಗಲಿಲ್ಲ. ಆದರೆ ಅವರು ಈ ಪ್ರದೇಶ ಸಂಪೂರ್ಣ ಶಾಂತವಾಗಿದ್ದು, ನಾವು ನಮ್ಮ ಗುರಿಯನ್ನು ತಲುಪುವುದು ಕಷ್ಟವಿಲ್ಲ, ಎಂದು ಮಾತನಾಡಿಕೊಳ್ಳುತ್ತಿದ್ದರು.ಅವರು ಭಾರವಾದ ಬ್ಯಾಗ್ ಹೊತ್ತಿದ್ದರು. ಅದರಲ್ಲಿ ಬಹುಶಃ ಸ್ಪೋಟಕಗಳು ಇದ್ದಿರಬಹುದು ಎಂದು ರಾಜೇಶ್ ತಿಳಿಸಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಾವು ಅವರ ವಶದಲ್ಲಿದ್ದೆವು, ನಾವು ಜೀವಂತ ಬದುಕಿ ಬರುತ್ತೇವೆಂದು ತಿಳಿದಿರಲಿಲ್ಲ. ಆದರೆ ದೇವರು ನಮಗೆ ಮರುಜನ್ಮ ನೀಡಿದ್ದಾನೆ. ಅವರ ಗುರಿಗೆ ಹತ್ತಿರ ಬಂದಾಗ ನಮ್ಮ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ನಮ್ಮನ್ನು ಕಾರಿನಿಂದ ಹೊರದೂಡಿದರು ಎಂದು ರಾಜೇಶ್ ಅಂದು ನಡೆದ ಘಟನಾವಳಿಗಳ ಕುರಿತು ಮಾಹಿತಿ ನೀಡಿದ್ದಾರೆ.

Write A Comment