ರಾಷ್ಟ್ರೀಯ

ಚಕ್ಕರ್ ಹೊಡೆಯದ ಕಾಲೇಜು ವಿದ್ಯಾರ್ಥಿಗಳಿಗೆ ಮೊಬೈಲ್ ಕೊಡುಗೆ

Pinterest LinkedIn Tumblr

mobile-india

ಭೋಪಾಲ್‌: ಕಾಲೇಜಿಗೆ ಚಕ್ಕರ್ ಹೊಡೆಯದೆ ಹಾಜರಾದವರಿಗೆ ಸ್ಮಾರ್ಟ್‌‌ಫೋನ್‌ಗಳನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. 2014-15, 2015-16ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಸರ್ಕಾರ ಈ ಆದೇಶ ಹೊರಡಿಸಿದೆ.

ಪದವಿ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಶೇಕಡ 75ರಷ್ಟು ತರಗತಿಗಳಿಗೆ ಹಾಜರಾದರೆ ಸ್ಮಾರ್ಟ್‌‌ಫೋನ್‌ಗಳನ್ನು ಕೊಡುಗೆಯಾಗಿ ಕೊಡುವುದಾಗಿ ಆ ರಾಜ್ಯದ ಉನ್ನತ ಶಿಕ್ಷಣ ಸಚಿವ ಉಮಾಶಂಕರ್‌ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2014-15, 2015-16ನೇ ಸಾಲಿನ ವಿದ್ಯಾರ್ಥಿಗಳಿಗೆ ಈ ಆದೇಶ ಅನ್ವಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್‌‌ಫೋನ್‌ಗಳನ್ನು ಗಿಫ್ಟ್ ನೀಡುವ ಸಲುವಾಗಿ ಸರ್ಕಾರ 4.5 ಲಕ್ಷ ಫೋನ್‌ಗಳನ್ನು ಖರೀದಿಸಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳಿಗೆ ನೀಡುವ ಸ್ಮಾರ್ಟ್‌‌ಫೋನ್‌ಗಳು ಉತ್ಕೃಷ್ಟ ಗುಣಮಟ್ಟದ್ದಾಗಿರುತ್ತವೆ. ವಿತರಣೆ ಪಾರದರ್ಶಕವಾಗಿರುತ್ತದೆ ಎಂದು ಸಚಿವ ಗುಪ್ತಾ ವಿವರಿಸಿದ್ದಾರೆ.

Write A Comment