ರಾಷ್ಟ್ರೀಯ

ಸ್ವಂತ ಮಗಳನ್ನೇ ಸೆಕ್ಸ್‌ ದಂಧೆಗೆ ಮಾರಿದ ಮಹಾತಾಯಿ!

Pinterest LinkedIn Tumblr

3daಬುರ್ದಾನ್‌: ಸ್ವಂತ ಮಗಳನ್ನು ಆಕೆಯ ತಾಯಿಯೇ ಬಲವಂತವಾಗಿ ವ್ಯಭಿಚಾರ ದಂಧೆಗೆ ಮಾರಿದ ಪ್ರಕರಣ ಪಶ್ಚಿಮ ಬಂಗಾಳದ ಬುರ್ದಾನ್‌ ಪ್ರದೇಶದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ, ಲೈಂಗಿಕ ಅಪರಾಧ ಮತ್ತಿತರ ಸೆಕ್ಷನ್’ಗಳ ಅಡಿಯಲ್ಲಿ ತಾಯಿಯ ವಿರುದ್ಧ ಕೇಸು ದಾಖಲಿಸಲಾಗಿದೆ. 13ರ ಪ್ರಾಯದ ಹುಡುಗಿಯನ್ನು ಹೆತ್ತ ತಾಯಿ ಕೋಲ್ಕತ್ತಾದ ಸೆಕ್ಸ್‌ ದಂಧೆಗಾರರಿಗೆ ರೂ 60 ಸಾವಿರಕ್ಕೆ ಮಾರಾಟ ಮಾಡಿದ್ದಾಳೆ. ಜನವರಿ 5ರಂದು ಘಟನೆ ನಡೆದಿದ್ದು, ಸೆಕ್ಸ್‌ ದಂಧೆ ನಡೆಸುತ್ತಿದ್ದವರು ಆಕೆಯನ್ನು ಕೋಲ್ಕತ್ತಾದ ರೆಡ್‌ ಲೈಟ್‌ ಏರಿಯಾಗೆ ಕರೆದ್ಯೊಯ್ದಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ತನ್ನ ತಾಯಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ತಾಯಿಯನ್ನು ಹಾಗೂ ಇದಕ್ಕೆ ಸಹಕರಿಸಿದ ಮಹಿಳೆಯನ್ನು ಅರೆಸ್ಟ್‌ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಬಾಲಕಿಯ ತಾಯಿ ತಾನು ಮಗಳನ್ನು ಮಾರಾಟ ಮಾಡಿಲ್ಲ ಎಂದಿದ್ದು, ಮಗಳ ಆರೋಪವನ್ನು ನಿರಾಕರಿಸಿದ್ದಾಳೆ.

Write A Comment