ರಾಷ್ಟ್ರೀಯ

‘ಸೋನಿಯಾ ಒಳ್ಳೆಯ ಹೆಂಡ್ತಿಯಾಗಿದ್ರೆ ರಾಜೀವ್‌ ಆಶಯ ಈಡೇರಿಸ್ಬೇಕು’

Pinterest LinkedIn Tumblr

4soನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತಮ ಹೆಂಡ್ತಿಯಾಗಿದ್ದರೆ ಪತಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಕನಸು ಈಡೇರಿಸಬೇಕು.

ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಸಹಕರಿಸಿ ಅವರ ಪತಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಆಶಯ ಈಡೇರಿಸಬೇಕು. ಇದು ವಿಶ್ವ ಹಿಂದೂ ಪರಿಷತ್ ಒತ್ತಾಯ.

ರಾಜೀವ್ ಗಾಂಧಿ ಅವರು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಆಶಯ ಹೊಂದಿದ್ದರು. ಅದೇ ಕಾರಣಕ್ಕೆ ಒಮ್ಮೆ ಅವರು ಆಯೋಧ್ಯೆಯಿಂದಲೇ ಕಾಂಗ್ರೆಸ್ ಪಕ್ಷದ ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದರು. ದೇಶದಲ್ಲಿ ರಾಮರಾಜ್ಯ ಬರಬೇಕು ಎಂದಿದ್ದರು.

ಸೋನಿಯಾ ಗಾಂಧಿ ರಾಜೀವ್ ಗಾಂಧಿಯವರ ಉತ್ತಮ ಪತ್ನಿಯಾಗಿದ್ದು, ಉತ್ತಮ ಪತ್ನಿಯಾಗಿ ಪತಿಯ ಆಶಯ ಈಡೇರಿಸಬೇಕು. ರಾಮಮಂದಿರ ಸಾಕಾರಗೊಳಿಸಲು ಮುಂದಾಗಬೇಕು ಎಂದು ವಿಶ್ವ ಹಿಂದು ಪರಿಷತ್ ವಕ್ತಾರ ಸುರೇಂದ್ರ ಜೈನ್ ಒತ್ತಾಯಿಸಿದ್ದಾರೆ.

Write A Comment