ರಾಷ್ಟ್ರೀಯ

ಸುಚೇತಾ ಕೃಪಲಾನಿಯಿಂದ ಮೆಹಬೂಬಾ ಮುಫ್ತಿ ವರೆಗೆ 16 ಮಹಿಳಾ ಸಿಎಂಗಳು

Pinterest LinkedIn Tumblr

muನವದೆಹಲಿ, ಜ.8-ಮುಫ್ತಿ ಮಹಮದ್ ಸಯೀದ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ 9ನೇ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ನಿರೀಕ್ಷೆಯಂತೆ ಅಧಿಕಾರ ವಹಿಸಿಕೊಂಡರೆ ಜಮ್ಮು-ಕಾಶ್ಮೀರದಲ್ಲಿ ಹೊಸದೊಂದು ಇತಿಹಾಸವೇ ನಿರ್ಮಾಣವಾಗಲಿದೆ. ಮೆಹಬೂಬಾ ಅವರು ಮುಖ್ಯಮಂತ್ರಿಯಾಗಲು ಪಕ್ಷದಲ್ಲಿ ಸರ್ವ ಸಮ್ಮತ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದ್ದು, ಮಿತ್ರಪಕ್ಷ ಬಿಜೆಪಿ ಕೂಡ ಇದನ್ನು ವಿರೋಧಿಸಿಲ್ಲ.

ಸುಚೇತ ಕೃಪಲಾನಿ ಅವರಿಂದ ಹಿಡಿದು ಇದುವರೆಗೆ 15 ಮಂದಿ ಮಹಿಳೆಯರು ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದು, ಮೆಹಬೂಬಾ ದೇಶದ 16ನೇ ಮುಖ್ಯಮಂತ್ರಿಯಾಗಲಿದ್ದಾರೆ.

ಸದ್ಯ ಮಮತಾ ಬ್ಯಾನರ್ಜಿ (ಪ.ಬಂ), ಜಯಲಲಿತಾ (ತ.ನಾ) ಆನಂದಿ ಬೆನ್ ಪಟೇಲ್ (ಗುಜರಾತ್) ಹಾಗೂ ವಸುಂಧರಾ ರಾಜೇ (ರಾಜಸ್ಥಾನ) ನಾಲ್ವರು ಮಹಿಳಾ ಮುಖ್ಯಮಂತ್ರಿಗಳು ಇದ್ದಾರೆ.

ಮಹಿಳಾ ಮುಖ್ಯಮಂತ್ರಿಗಳ ಪಟ್ಟಿ : 1963ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸುಚೇತಾ ಕೃಪಲಾನಿ ಅಧಿಕಾರಕ್ಕೆ ಬಂದಿದ್ದರು. 1972ರಿಂದ ಒರಿಸ್ಸಾದಲ್ಲಿ ನಂದಿನಿ ಸತ್ಪಥಿ, 1973ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಶಶಿಕಲಾ ಕಾಕೋಡ್ಕರ್, ಅಸ್ಸಾಂನಲ್ಲಿ ಸಯೀದಾ ಅನ್ವರ್ ತೈಮೂರ್ ಅವರು 1980ರಲ್ಲಿ ಮುಖ್ಯಮಂತ್ರಿಯಾಗಿದ್ದರು.

ತಮಿಳುನಾಡಿನಲ್ಲಿ 1988ರಲ್ಲಿ ಕೆಲವು ದಿನ ಜಾನಕೀ ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದರು. ನಂತರ ಜಯಲಲಿತಾ 5 ಬಾರಿ ಮುಖ್ಯಮಂತ್ರಿಯಾದರು (ಈಗಲೂ ಅವರೇ ಇದ್ದಾರೆ). 1995 ರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮಾಯಾವತಿ ನಾಲ್ಕು ಬಾರಿ ಅಧಿಕಾರ ನಡೆಸಿದರು. 1996ರಲ್ಲಿ ರಾಜೀಂಧರ್‌ಕೌರ್ ಪಟ್ಟಾಲ್ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು. ರಾಬ್ರಿದೇವಿ ಅವರು ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. 1998ರಲ್ಲಿ ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿಯಾಗಿದ್ದರು. ನಂತರ 1998ರಿಂದ 2013ರವರೆಗೂ ಶೀಲಾ ಧೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.

2003ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಉಮಾಭಾರತಿ ಅಧಿಕಾರಕ್ಕೆ ಬಂದಿದ್ದರು. ಬಳಿಕ 2003ರಿಂದ 2008ರವೆಗೆ ಮತ್ತು 2013ರ ವರೆಗೆ 2 ಅವಧಿಗೆ ವಸುಂಧರಾ ರಾಜೇ ರಾಜಸ್ಥಾನ ಮುಖ್ಯಮಂತ್ರಿಯಾಗಿದ್ದು, ಈಗಲೂ ಅವರೇ ಅಧಿಕಾರದಲ್ಲಿದ್ದಾರೆ. 2014ರಿಂದ ಆನಂದಿ ಬೆನ್ ಪಟೇಲ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.

Write A Comment