ರಾಷ್ಟ್ರೀಯ

ತ್ರಿಶೂಲ್ ವಾಯುನೆಲೆ ಬಳಿ ಶಂಕಿತ ಯುವಕರಿಬ್ಬರ ಸೆರೆ

Pinterest LinkedIn Tumblr

trishulಬರೇಲಿ, ಜ.10-ಇಲ್ಲಿನ ತ್ರಿಶೂಲ್ ವಾಯುನೆಲೆ ಬಳಿ ಅನುಮಾನಾಸ್ಪದವಾಗಿ ಸಂಚಾರ ಮಾಡುತ್ತಿದ್ದ ಇಬ್ಬರು ಕಾಶ್ಮೀರದ ಯುವಕರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಇಬ್ಬರನ್ನೂ ತನಿಖೆಗೆ ಒಳಪಡಿಸಿದ್ದಾರೆ.

ತ್ರಿಶೂಲ್ ವಾಯುನೆಲೆ ಸಮೀಪದ ರೀತಾಹುರ ಬಜಾರ್ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ವಶಕ್ಕೆ ಪಡೆದಿರುವ ಈ ಇಬ್ಬರನ್ನು 28 ವರ್ಷದ ಮೊಹಬತ್ ಹುಸೇನ್ ಹಾಗೂ 30 ವರ್ಷದ ಜಾಫರ್ ಇಕ್ಬಾಲ್ ಎಂದು ಗುರುತಿಸಲಾಗಿದೆ. ಇಬ್ಬರೂ ಜಮ್ಮು-ಕಾಶ್ಮೀರದವರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಶ್ರೀವಾಸ್ತವ್ ತಿಳಿಸಿದ್ದಾರೆ.

ತಾವು ಮದರಸಾಕ್ಕೆ ದೇಣಿಗೆ ಸಂಗ್ರಹಿಸಲು ಬಂದಿದ್ದೇವೆ ಎಂದು ಈ ವ್ಯಕ್ತಿಗಳು ಹೇಳುತ್ತಿದ್ದರೂ, 11 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಿರುವುದು ಅವರ ಬಗ್ಗೆ ಸಂದೇಹ ಉಂಟುಮಾಡಿದೆ.

ಅವರ ಬಳಿ ಕೈ ಬರಹದ ಗುರುತಿನ ಚೀಟಿ ಹಾಗೂ ಮೊಬೈಲ್ ಫೋನ್ ದೊರೆತಿದ್ದು, ಇದರಿಂದ ಅವರು ಪೂಂಛ್ ಜಿಲ್ಲೆಗೆ ಸೇರಿದವರೆಂದು ತಿಳಿದುಬರುತ್ತದೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ.  ಅವರು ಬಳಸುತ್ತಿರುವ ಸಿಮ್‌ಕಾರ್ಡ್ ನಕಲಿ ದಾಖಲೆ ನೀಡಿ ಮೊರಾದಾಬಾದ್‌ನಲ್ಲಿ ಖರೀದಿಸಿದ್ದಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಬೇಹುಗಾರಿಕೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಅವರ ದೂರವಾಣಿ ಕರೆಗಳ ಪರಿಶೀಲನೆ ನಡೆದಿದೆ. ಜ.7ರಂದು ಬಟ್ಟೆ ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ ವಿಚಾರಣೆ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.

Write A Comment