ಶ್ರೀನಗರ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾನುವಾರ ಪಿಡಿಪಿ ಮುಖ್ಯಸ್ಥೆ ಹಾಗೂ ಕಳೆದ ಗುರುವಾರ ನಿಧನರಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ಮೆಹಬೂಬಾ ಮುಫ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದರು.
ಇಂದು ಮಧ್ಯಾಹ್ನ ಗುಪ್ಕರ್ನಲ್ಲಿರುವ ಮೆಹಬೂಬಾ ಮುಫ್ತಿ ಅವರ ನಿವಾಸ ಫೇರ್ವ್ಯೂ ಆಗಮಿಸಿದ ಸೋನಿಯಾ ಗಾಂಧಿ, ಸುಮಾರು 20 ನಿಮಿಷಗಳ ಕಾಲ ಮೆಹಬೂಬಾ ಜೊತೆಗಿದ್ದರು.
ಸೊನಿಯಾ ಗಾಂಧಿಯವರ ಜತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಪಕ್ಷದ ಪ್ರಧಾನ ಕಾರ್ಯದರ್ಶಿ ಅಂಬಿಕಾ ಸೋನಿ, ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಜಿ ಎ ಮೀರ್ ಹಾಗೂ ಸೈಫುದ್ದೀನ್ ಸೋಜ್ ಇದ್ದರು.
ರಾಷ್ಟ್ರೀಯ