ರಾಷ್ಟ್ರೀಯ

ಶಬರಿಮಲೆ, ಮಹಿಳಾ ಪ್ರವೇಶ ನಿಷೇಧ ಅಸಾಧ್ಯ ಎಂದ ಸುಪ್ರೀಂ

Pinterest LinkedIn Tumblr

sharimalaiನವದೆಹಲಿ: ಸಂವಿಧಾನಬದ್ಧ ಹಕ್ಕು ಇರದ ಹೊರತು ಶಬರಿಮಲೆ ದೇವಸ್ಥಾನವು ಮಹಿಳೆಯರ ಪ್ರವೇಶವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಇಲ್ಲಿ ಹೇಳಿತು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಎತ್ತಿ ಹಿಡಿದ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಏಕೆ ಪ್ರವೇಶ ನೀಡಬಾರದು ಎಂದು ಪ್ರಶ್ನಿಸಿತು. ಸಂವಿಧಾನ ಹೇಳುವವರೆಗೆ ದೇವಾಲಯಕ್ಕೆ ಮಹಿಳಾ ಪ್ರವೇಶವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಪೀಠ ಹೇಳಿತು.

ಶಬರಿಮಲೆ ದೇವಾಲಯಕ್ಕೆ 10ರಿಂದ 50ರ ಒಳಗಿನ ವಯಸ್ಸಿನ ಮಹಿಳೆಯರನ್ನು ಬಿಡುವ ಪರಿಪಾಠವಿಲ್ಲ. ಕನ್ನಡ ಚಿತ್ರ ನಟಿ ಜಯಮಾಲಾ ಅವರು ಅಯ್ಯಪ್ಪ ದೇಗುಲ ಪ್ರವೇಶಿಸಿ ಅಯ್ಯಪ್ಪನ ಪಾದ ಮುಟ್ಟಿದ ಪ್ರಕರಣದಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಬಳಿಕ ಪ್ರಕರಣ ನ್ಯಾಯಾಲಯದ ಕಟ್ಟೆ ಏರಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪ್ರಮಾಣ ಪತ್ರ ಸಲ್ಲಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸಿದ ಸುಪ್ರೀಂಕೋರ್ಟ್, ತಮ್ಮ ನಿಲುವು ಸ್ಪಷ್ಟ ಪಡಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಶಬರಿ ಮಲೆ ದೇವಾಲಯದ ಆಡಳಿತಗಾರರಿಗೂ ನಿರ್ದೇಶನ ನೀಡಿತು.

Write A Comment