ರಾಷ್ಟ್ರೀಯ

ಅತ್ತೆಯನ್ನು ಥಳಿಸಿ ಕೊಲ್ಲಲು ಯತ್ನಿಸಿದ ಸೊಸೆ…

Pinterest LinkedIn Tumblr

5soseನೆಹ್‌ತೌರ್: ಸೊಸೆಯೊಬ್ಬಳು ಅತ್ತೆಯನ್ನು ಮನಸೋ ಇಚ್ಛೆ ಥಳಿಸಿ ನಂತರ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ನೆಹ್‌ತೌರ್‌ ನಡೆದಿದೆ. ಸಂಗೀತಾ ಜೈನ್‌ ಎಂಬ ಸೊಸೆ ಇಂತಹ ದುಷ್ಕೃತ್ಯಕ್ಕೆ ಯತ್ನಿಸಿದ್ದು, ಈ ದೃಶ್ಯವಾಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದೇ ತಿಂಗಳು 5ರಂದು ಈ ಘಟನೆ ನಡೆದಿದೆ, 70 ವರ್ಷದ ವೃದ್ಧೆ ರಾಜ್ರಾಣಿ ಜೈನ್ ಸೊಸೆ ಸಂಗೀತಾಳಿಂದ ಥಳಿತಕ್ಕೊಳಗಾದ ಅತ್ತೆ. ರಾಜ್ರಾಣಿಯನ್ನು ಕಲ್ಲು, ರಾಡ್‌‌ಗಳಿಂದ ಸಂಗೀತಾ ಥಳಿಸಿದ್ದಾಳೆ. ಅಲ್ಲದೇ ಈ ಹಿಂದೆ ಕೂಡ ಅನೇಕ ಅತ್ತೆಯನ್ನು ಸಂಗೀತಾ ಥಳಿಸಿದ್ದಳು ಎಂದು ಹೇಳಲಾಗಿದೆ. ಸದ್ಯ ಆರೋಪಿ ಸಂಗೀತಾಗಳನ್ನು ಪೊಲೀಸರು ಬಂಧಿಸಿದ್ದಾರೆ.

7 ವರ್ಷದ ಹಿಂದೆ ಸಂದೀಪ್‌ ಜೈನ್‌ನನ್ನು ಮದುವೆಯಾಗಿದ್ದ ಸಂಗೀತಾ. ಇದೇ 4 ರಂದು ಸಂದೀಪ್‌ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಅತ್ಯಾಚಾರರ ದೂರು ದಾಖಲಿಸಿದ್ದಳು ಎನ್ನಲಾಗಿದೆ. ಹಾಗೂ ಇದಕ್ಕೂ ಮೊದಲು ಇವರಿಬ್ಬರ ಡೈವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇನ್ನು, ಪತ್ನಿ ಸಂಗೀತಾಳ ಮುಖವಾಡ ಕಳಚಲು ಪತಿ ಸಂದೀಪ್ ಜೈನ್ ತನ್ನ ತಾಯಿ ಕೊಠಡಿಯಲ್ಲಿ ಸಿಸಿವಿಟಿ ಅಳವಡಿಸಿದ್ದ ಎನ್ನಲಾಗಿದೆ. ಇತ್ತ ಸಂಗೀತಾ ಕೂಡ ಇದು ಫೇಕ್‌ ವಿಡಿಯೋ ಆಗಿದ್ದು, ಇದು ನನ್ನ ವಿರುದ್ಧದ ಪಿತೂರಿ ಎಂದು ಸಂದೀಪ್ ಕುಟುಂಬದ ಮೇಲೆ ಆರೋಪಿಸಿದ್ದಾಳೆ.

Write A Comment