ರಾಷ್ಟ್ರೀಯ

ತಿರುಚ್ಚಂದೂರ್‌ ಕಡಲತೀರದಲ್ಲಿ ನೂರಾರು ವೇಲ್ಸ್‌ ಗಳು ಪ್ರತ್ಯಕ್ಷ

Pinterest LinkedIn Tumblr

velsಚೆನ್ನೈ, ಜ.11- ಕಡಲಾಳದಲ್ಲಿ ಜೀವಿಸುವ ವೇಲ್ಸ್‌ಗಳು ಹಿಂಡು ಹಿಂಡಾಗಿ ಪ್ರತ್ಯಕ್ಷಗೊಂಡು ತೀರಕ್ಕೆ ಬಂದು ಬೀಳುತ್ತಿರುವ ಘಟನೆ ತಿರುಚ್ಚಂದೂರ್‌ನಲ್ಲಿ ನಡೆದಿದೆ.

ಇಲ್ಲಿಂದ 600 ಕಿ.ಮೀ. ದೂರದಲ್ಲಿರುವ ಮಟಿಕೊರಿನ್ ಕಡಲ ತೀರದಲ್ಲಿ ಸುಮಾರು ನೂರು ವೇಲ್ಸ್‌ಗಳು ಹಿಂಡು ಹಿಂಡಾಗಿ ತೀರಕ್ಕೆ ಬಂದು ಬಿದ್ದಿವೆ. ಇದನ್ನು ಕಂಡ ಮೀನುಗಾರರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿದ್ದು , ಮೀನುಗಾರರ ಸಹಕಾರದೊಂದಿಗೆ ವೇಲ್ಸ್‌ಗಳನ್ನು ಮರಳಿ ಸಮುದ್ರಕ್ಕೆ ಎಳೆದು ಬಿಟ್ಟರೂ ಅವು ಮತ್ತೆ ತೀರಕ್ಕೆ ಬಂದು ಬೀಳುತ್ತಿವೆ. ಈ ಘಟನೆ ಅಚ್ಚರಿ ಮೂಡಿಸಿದ್ದು, ವೇಲ್ಸ್‌ಗಳು ಹೀಗೆ ಸಾಮೂಹಿಕವಾಗಿ ತೀರಕ್ಕೆ ಬಂದು ಬೀಳಲು ಕಾರಣ ಏನೆಂಬುದನ್ನು ಶೋಧ ಮಾಡಲಾಗುತ್ತಿದೆ.

Write A Comment