ಲಖನೌ: ತನ್ನನ್ನು ಪ್ರೀತಿಸಿ, ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನಿಗೆ ಯುವತಿಯೊಬ್ಬಳು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಇನಾಂಪುರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ದಲಿತ ಯುವಕ ಸೂರಜ್ ಮೇಲೆ 19 ವರ್ಷದ ಯುವತಿ ಅಫ್ರಿನ್ ಆ್ಯಸಿಡ್ ಎರಚಿದ್ದಾಳೆ.
ಯುವಕನ ದೇಹ ಶೇ.50ರಷ್ಟು ಸುಟ್ಟಿದೆ. ಹುಟ್ಟುಹಬ್ಬ ಸಂಭ್ರಮ ಆಚರಿಸಿ ವಾಪಸ್ಸಾಗುತ್ತಿದ್ದ ವೇಳೆ ಯುವತಿ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ.
ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಿನಿಂದಲೂ ಅಫ್ರಿನ್ ಮತ್ತು ನನ್ನ ನಡುವೆ ಸಂಬಂಧವಿತ್ತು. ಆದರೆ, ಇತ್ತೀಚೆಗೆ ನಮ್ಮ ಪೋಷಕರು ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯಿಸಿದ್ದರು ಎಂದು ಸೂರಜ್ ತಾನು ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.