ರಾಷ್ಟ್ರೀಯ

67 ಲೀ. ಹಾಲು ಕೊಡುತ್ತೆ ಹಸು!

Pinterest LinkedIn Tumblr

NATION-112ಮೊಗಾ: ಹಸುವೊಂದು ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡಲು ಸಾಧ್ಯ? 20,30 ಲೀಟರ್ ಎಂದು ಹೇಳಬಹುದೇನೋ, ಆದರೆ ಪಂಜಾಬ್​ನ ಮೊಗಾ ನಿವಾಸಿ ಹರ್​ಪ್ರೀತ್ ಸಿಂಗ್ ಹುಂದಾಲ್ ಫಾಮ್ರ್ ನಲ್ಲಿರುವ ಹಸು ದಿನಕ್ಕೆ 66.7 ಲೀಟರ್ ಹಾಲು ನೀಡುತ್ತದೆ. ಈ ಮೂಲಕ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿದೆ. ಈ ಹಿಂದೆ ಪಂಜಾಬ್​ನ ಸರ್ದಾರ್​ಪುರ ಗ್ರಾಮದ ದಲ್ಜೀತ್ ಸಿಂಗ್ ಅವರ ಹಸು 61.8ಲೀಟರ್ ಹಾಲು ನೀಡುವ ಮೂಲಕ ದಾಖಲೆಯನ್ನು ಸೃಷ್ಟಿಸಿತ್ತು.

ದಿನಕ್ಕೆ 15 ಕೆಜಿ ಹಿಂಡಿ

ಈ ಹಸು ಹೋಲ್ಸ್​ಟೀನ್ ಫ್ರಿಸಿಯನ್ ತಳಿಯದ್ದಾಗಿದ್ದು, ದಿನಕ್ಕೆ 15 ಕೆಜಿಯಷ್ಟು ಹಿಂಡಿಯನ್ನು ನೀಡಲಾಗುತ್ತದೆ. ಅಲ್ಲದೆ ಇದರ ಆಹಾರ ಕ್ರಮದ ಬಗ್ಗೆ ನಿಗಾ ಇರಿಸಿರುವುದರಿಂದ ಹೆಚ್ಚು ಹಾಲು ಉತ್ಪಾದನೆ ಸಾಧ್ಯವಾಗುತ್ತಿದೆ ಎಂದು ಹುಂದಾಲ್ ಹೇಳಿದ್ದಾರೆ. ಹುಂದಾಲ್ ಮೊಗಾ ಜಿಲ್ಲೆಯ ನೂರ್​ಪುರ್ ಹಾಕಿಮಾ ಗ್ರಾಮದಲ್ಲಿ ಹೈನುಗಾರಿಕೆ ನಡೆಸುತ್ತಿದ್ದು, 140 ಹಸುಗಳಿಂದ ದಿನಕ್ಕೆ 2000 ಲೀ. ಹಾಲು ಉತ್ಪಾದನೆ ನಡೆಸುತ್ತಾರೆ. ಇದು ಇನ್ನೊಂದು ದಾಖಲೆ ನಿರ್ವಿುಸಿದ್ದು, ಇದಕ್ಕಾಗಿ 1.5 ಲಕ್ಷ ರೂ. ಬಹುಮಾನವನ್ನೂ ಪಡೆದಿದ್ದಾರೆ.

Write A Comment