ರಾಷ್ಟ್ರೀಯ

1971ರಲ್ಲಿ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲೆ.ಜ. ಜೆಎಫ್‌ಆರ್ ಜಾಕೋಬ್ ನಿಧನ

Pinterest LinkedIn Tumblr

yuನವದೆಹಲಿ ಜ.13 : 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ಥಾನ ಶರಣಾಗುವಂತೆ ಮಾಡಿ ಭಾರತಕ್ಕೆ ವಿಜಯ ದೊರಕಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಮಾಜಿ ಹಿರಿಯ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಜೆಎಫ್‌ಆರ್ ಜಾಕೋಬ್ (92) ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ ಸೇನೆಯ ಮೂಲಗಳು ತಿಳಿಸಿವೆ.

ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. 1923ರಲ್ಲಿ ಬ್ರಿಟಿಷ್ ಇಂಡಿಯಾದ ಬಂಗಾಳ ಪ್ರೆಸಿಡೆನ್ಸಿಯಲ್ಲಿ ಜನಿಸಿದ ಜಾಕೋಬ್, ತಮ್ಮ 19ನೇ ವಯಸ್ಸಿನಲ್ಲೇ ಸೇನೆಗೆ ಸೇರ್ಪಡೆಗೊಂಡಿದ್ದರು.

1965ರ ಭಾರತ-ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಅವರು, 1978ರಲ್ಲಿ ನಿವೃತ್ತಿ ಹೊಂದಿದರು. 2ನೇ ಮಹಾಯುದ್ಧದಲ್ಲಿ ಹೋರಾಡಿದ ಕೀರ್ತಿ ಅವರದ್ದಾಗಿದೆ. ಜಾಕೋಬ್ ಅವರು ಪಂಜಾಬ್ ಹಾಗೂ ಗೋವಾ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

Write A Comment